ಜುಗೂಳ ಗ್ರಾ ಪಂ ವ್ಯಾಪ್ತಿಯ ಶಹಾಪೂರ ಗ್ರಾಮಕ್ಕೆ ಜಿ.ಪಂ. ಸಿಇಓ ಭೇಟ್ಟಿ..! ಜೆಜೆಎಂ ಕಾಮಗಾರಿ ಪರೀಶೀಲನೆ..!!
Z.P. CEO visits Shahapura village under Jugula Gram Panchayat! Inspection of JJM work..!!
ಕಾಗವಾಡ 18: ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮಕ್ಕೆ ಗುರುವಾರ ದಿ. 17 ರಂದು ಬೆಳಗಾವಿ ಜಿಲ್ಲಾ ಪಂಚಾಯತಿಯ ಸಿಇಓ ರಾಹುಲ ಶಿಂಧೆ ಭೇಟ್ಟಿ ನೀಡಿ, ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಪೂರ್ಣಗೊಂಡ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಜೆಜೆಎಂ ಕಾಮಗಾರಿಯ ವಿಕ್ಷಣೆ ಮಾಡಿ, ಸಂತಸ ವ್ಯಕ್ತಪಡಿಸಿದರು.
ಜೊತೆಗೆ ಈ ವರ್ಷದ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜುಗೂಳ ಗ್ರಾಮ ಆಯ್ಕೆಯಾಗಿರುವ ಕುರಿತು ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದರು.
ಈ ವೇಳೆ ಕಾಮಗಾರಿಯ ಗುತ್ತಿಗೆದಾರ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಉಮೇಶ ಪಾಟೀಲ ಸಿಇಓ ಅವರಿಗೆ ಕಾಮಗಾರಿಯ ಕುರಿತು ಮಾಹಿತಿ ನೀಡಿದರು. ಇನ್ನೂ ದ್ವೀತಿಯ ಹಂತದ ಕಾಮಗಾರಿ ಜುಗೂಳ ಮತ್ತು ಮಂಗಾವತಿ ಗ್ರಾಮದಲ್ಲಿ ಕೊನೆಯ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ ಅವರು, ಜುಗೂಳ ಗ್ರಾಮದ ಅಭಿವೃದ್ಧಿ ಸಾಕಷ್ಟು ಸಹಕಾರ ನೀಡುತ್ತಿರುವ ಶಾಸಕ ರಾಜು ಕಾಗೆ, ಸಂಸದೆ ಪ್ರೀಯಾಂಕಾ ಜಾರಕಿಹೊಳಿಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಮಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವೀಂದ್ರ ಮುರಗಾಲಿ, ಎಸ್‌ಓ ಕಿರಣ ಮಾಳಿ, ಅಕ್ಷಯ ಚುರಮುರಿ, ತಾ.ಪಂ. ವೀರಣ್ಣಾ ವಾಲಿ, ಜುಗೂಳ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಕಾಸಾಬ ಪಾಟೀಲ, ಪಿಡಿಓ ಶೈಲಶ್ರೀ ಬಜಂತ್ರಿ, ತಾತ್ಯಾಸಾಬ ಜಾಧವ, ವಿಜಯ ನಾಯಿಕ, ಮಲಗೌಡಾ ಪಾಟೀಲ, ಶಿವಾನಂದ ಪಾಟೀಲ, ಬಾಬಾಸಾಹ ಹುನ್ನರಗೆ, ಆನಂದ ಭಿರಡಿ, ಬಾಬಾಸಾಬ ತಾರದಾಳೆ, ಅವಿನಾಶ ಪಾಟೀಲ, ದಾದಾ ಅಂಬಿ, ಚಿದಾನಂದ ತಾರದಾಳೆ, ಅಮೀನ ನಂದಗಾಂವೆ ಸೇರಿದಂತೆ ಜುಗೂಳ, ಶಹಾಪೂರ ಗ್ರಾಮಸ್ಥರು ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 