ತಂಬಾಕು ಮುಕ್ತ ಸಮಾಜ ನಿರ್ಮಾನಕ್ಕೆ ಯುವಜನತೆ ಕೈಜೋಡಿಸಬೇಕು: ಡಾ.ಪ್ರಮೋದ ಸಿಂದಗಿ
Youth should join hands in building a tobacco-free society: Dr. Pramoda Sindagi
ಯರಗಟ್ಟಿ, 02 : ತಂಬಾಕು ಮುಕ್ತ ಸಮಾಜ ನಿರ್ಮಾನಕ್ಕೆ ಯುವಜನತೆ ಕೈಜೋಡಿಸಬೇಕು. ತಂಬಾಕು ಸೇವನೆಯಿಂದ ಸಾಮಾಜಿಕ ಮತ್ತು ದೈಹಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ತಡೆಗಟ್ಟಲು ಯುವ ಜನತೆ ಮುಂದಾಗಬೇಕು ಎಂದು ವೈದ್ಯಾಧಿಕಾರಿ ಡಾ.ಪ್ರಮೋದ ಸಿಂದಗಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರುಷರಲ್ಲಿ ತಂಬಾಕು ಸೇವನೆಯಿಂದ ಸಂತಾನ ಹೀನತೆಗೆ ಕಾರಣವಾಗಬಹುದು ಎಂದರು.
ಶುಶ್ರೂಷಾಧಿಕಾರಿ ವಿರೇಶ ದೇಮಶೇಟ್ಟಿ ಮಾತನಾಡಿ, ದುಶ್ಚಟಗಳು ಮಕ್ಕಳ ಬದುಕನ್ನು ನಾಶಮಾಡುತ್ತವೆ. ತಂಬಾಕು ವಿರೋಧಿ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಇತರರಿಗೆ ವ್ಯಸನಗಳಿಂದ ದೂರವಿರಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಹಲಗಲಿ, ಪಾರ್ಮಸಿ ಅಧಿಕಾರಿ ಆರತಿ ಹೊಳ್ಳಿಕೇರಿ, ಎಲ್‌ಟಿಒ ಶಶಿಧರ ಉಪ್ಪಿನ, ವಸಂತ ಚವ್ಹಾನ, ಗೀತಾ ಪೋಳ, ಜಿ.ಪಿ.ಹೊಂಗಲ, ಶಂಕರ ಲಮಾಣಿ, ಮಹಾವೀರ ಜೊಡಟ್ಟಿ, ರಾಜೇಶ್ವರಿ ನಾಯ್ಕರ, ಬಸವ್ವ ಕುಂಬಾರ, ನೀಲವ್ವ ಬೆನಕಟ್ಟಿ, ಶೋಭಾ ಚುಳಕಿ, ಶಾಂತವ್ವ ಜಡೆಯರ, ಮಹಾದೇವಿ ಬಾರ್ಕಿ, ಬೀಮವ್ವ ಬಜಂತ್ರಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 