ದೇವರನ್ನು ಪೂಜಿಸಿ - ಹಾಲನ್ನು ದೇವರ ಸಮಾನವಾದ ಮಕ್ಕಳಿಗೆ ನೀಡಿ : ಗಾಜಿಯವರ
ಲೋಕದರ್ಶನ ವರದಿ
ಶಿಗ್ಗಾವಿ 17: ದೇವರಿಗೆ ಪೂಜಿಸಿ ವಂದಿಸಿ ಆದರೆ ಹಾಲು ಪೌಷ್ಟಿಕ ಆಹಾರ ಅಮೃತ ಸಮಾನ ಅದನ್ನು ನಾಗದೇವರ ಮೂತರ್ಿಗೆ ಎರೆದು ವ್ಯರ್ಥ ಮಾಡದೆ, ಮಕ್ಕಳೂ ದೇವರ ಸಮಾನ ಅವರಿಗೆ ನೀಡಿ ಸದೃಢ ಸಮಾಜ ನಿಮರ್ಿಸಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರುಶರಾಮ ಗಾಜಿಯವರ ಹೇಳಿದರು.
ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರ ಪಂಚಮಿ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಕ್ಕಳಿಗೆ ರೋಗಿಗಳಿಗೆ ಹಾಲು, ಬಿಸ್ಕಿಟ್, ಬಾಳೇಹಣ್ಣು ಹಂಚಿ ಮಾತನಾಡಿದ ಅವರು, ಎಷ್ಟೋ ಮಕ್ಕಳು ತಾಯಂದಿರು ಅಪೌಷ್ಟಿಕತೆಯಿಂದ ರಕ್ತದ ಕೊರತೆ ಅನುಭವಿಸುತ್ತಿದ್ದಾರೆ ದೇವರಿಗೆ ಎರೆಯುವ ಹಾಲನ್ನು ಅಂತವರಿಗೆ ನೀಡಿ ದೇವರ ಆಶಿವರ್ಾದಕ್ಕೆ ಪಾತ್ರರಾಗಿ ಎಂದು ಸಲಹೆ ನೀಡಿದರು.
ರಾಜ್ಯ ಗುಪ್ತ ವಾತರ್ೆ ಘಟಕ ಶಿಗ್ಗಾಂವನ ಎಮ್.ಎಸ್.ಶಿವಣ್ಣವರ ಮಾತನಾಡಿ, ದೇವರನ್ನು ಶುದ್ದ ಮನಸ್ಸಿನಿಂದ ನೆನೆದು ಹಾಲು ಹಣ್ಣುಗಳನ್ನು ಅನಾಥ ಮಕ್ಕಳು ಬಡವರು ಹಾಗೂ ರೋಗಿಗಳಿಗೆ ದಾನಮಾಡಿ ದೇವರ ಆಶಿವರ್ಾದಕ್ಕೆ ಪಾತ್ರರಾಗಿ ಎಂದರು.
ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಮಾನವ ಹಕ್ಕುಗಳ ಸಂಸ್ಥೆಯ ತಾಲೂಕ ಅಧ್ಯಕ್ಷ ಅಶೋಕ ಕಾಳೆ ಹಾಗೂ ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಜೈ ಕರುನಾಡ ವೇದಿಕೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಂಕಾರ ನೆತೃತ್ವದಲ್ಲಿ ಮಕ್ಕಳಿಗೆ ರೋಗಿಗಳಿಗೆ ಹಾಲು, ಬಿಸ್ಕಿಟ್, ಬಾಳೇಹಣ್ಣು ಹಂಚಿದರು.
ಆಸ್ಪತ್ರೆಯ ತಜ್ಞ ವೈದ್ಯರಾದ ಡಾ|| ಗುರುರಾಜ, ಮಂಜುನಾಥ ವಡ್ಡರ, ರಾಜೇಸಾಬ, ಪ್ರಭು ಕುರಂದವಾಡ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 