ವಿಶ್ವ ತಂಬಾಕುರಹಿತ ದಿನಾಚರಣೆ: ಯುವಕರಿಗೆ ಜಾಗೃತಿ ಕಾರ್ಯಕ್ರಮ
World No Tobacco Day: Awareness program for youth
ಲೋಕದರ್ಶನ ವರದಿ
ಗದಗ 04: ಪ್ರತಿ ವರ್ಷದಂತೆ ಈ ವರ್ಷ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು “ಆಕರ್ಷಣೆಯನ್ನು ಬಹಿರಂಗಪಡಿಸುವುದು - ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು” ಎಂಬ ಘೋಷಣೆಯೊಂದಿಗೆ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಜಿಲ್ಲಾ ಪೊಲೀಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಇಂಡಿಯನ್ ಕ್ಯಾನ್ಸ್‌ರ್ ಸೊಸೈಟಿ, ಜಿಲ್ಲಾ ಎನ್.ಸಿ.ಟಿ ಘಟಕ ಗದಗ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ ಇವರ ಸಂಯುಕ್ತಾಶ್ರಯದಲ್ಲಿ ಜೂನ್ 3 ರಂದು ಜಿಲ್ಲಾ ಎಸ್.ವಿ.ಟಿ ಪ್ಯಾರ್ ಮೇಡಿಕಲ್ ಕಾಲೇಜನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಂದರೆ ತಂಬಾಕು ಉತ್ಪನ್ನಗಳ ಆಕರ್ಷಕ ಪ್ಯಾಕ್‌ಜಿಂಗ, ವಿವಿಧ ಬಣ್ಣ ಮತ್ತು ಸುವಾಸನೆ, ಪ್ಲೇವರ್ ಹಾಗೂ ಡಿಜಿಟಲ್ ಮಾರ್ಕೆಟ್ ಮೂಲಕ ಉತ್ಪನ್ನಗಳ ಫ್ಯಾಸನ್‌ಯಾಗಿ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಸನಗಳಿಯಾಗುವಂತೆ ಮಾಡಲಾಗುತ್ತಿದೆ, ಹಾಗೂ ತಂಬಾಕು ಮತ್ತು ನಿಕೋಟನ್ ವ್ಯಸನಿಗಳಿಗೆ ತಂಬಾಕು ವ್ಯಸನ ಮುಕ್ತ ಕೇಂದ್ರಗಳ ಮೂಲಕ ಹಾಗೂ ವ್ಯಸನ ತ್ಯಜಿಸುವ ಸಹಾಯವಾಣಿಗಳ ಮೂಲಕ ತಂಬಾಕು ವ್ಯಸನದಿಂದ ಹೊರಬರಲು ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತಂಬಾಕು ವ್ಯಸನದಿಂದ ಆರೋಗ್ಯದ ಮೇಲೆ ಬಹಳಷ್ಟು ದುಷ್ಟರಿಣಾಮಗಳ ಉಂಟಾಗುತ್ತವೆ. ಉದಾಹರಣೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಹಾಗೂ ತಂಬಾಕಿನಲ್ಲಿನ ನಿಕೋಟಿನ್ ಅಂಶ ರಕ್ತನಾಳಗಳಲ್ಲಿ ಸೇರಿ ದೇಹದ ಪ್ರತಿಯೊಂದು ಅಂಗದ ಮೇಲೆ ಪರಿಣಾಮ ಬಿರುತ್ತದೆ
ಉಪ ಪೊಲೀಸ ವರಿಷ್ಟಾಧಿಕಾರಿ ಎಂ.ಐ ಸಜ್ಜನವರ ಕೋಟ್ಪಾ ಕಾಯ್ದೆ ಕುರಿತು ಮಾತನಾಡುತ್ತ ಶಾಲಾ ಸುತ್ತ-ಮುತ್ತ 100 ಗಜದವರೆಗೆ ತಂಬಾಕು ಮಾರಾಟ ಕಂಡುಬಂದಲ್ಲಿ ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆಯಾದಲ್ಲಿ 112 ಗೆ ಕರೆ ಮಾಡಿದರೆ ತಕ್ಷಣ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ವಿನಯ ಕುಬಸದ್ ಪ್ರಾಚಾರ್ಯರು ಎಸ್.ವಿ.ಟಿ.ಪ್ಯಾರ್ ಮೇಡಿಕಲ್ ಕಾಲೇಜು ಗದಗ ಇವರು ಮಾತನಾಡಿ ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳ ಅವಶ್ಯಕವಿದ್ದು ಈ ಮಾಹಿತಿಯನ್ನು ನಮ್ಮ ಕುಟುಂಬ, ಸೇಹ್ಮಿತರಿಗೆ ಸಮುದಾಯದಲ್ಲಿ ಹಂಚಿಕೊಳ್ಳವುದರ ಮೂಲಕ ಇನ್ನು ಹೆಚ್ಚಿನ ಜಾಗೃತಿ ಮೂಡಿಸಲು ಅನುಕೂಲಕರವಾಗುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವ್ಹಾಣ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲಾ ಸುರಪುರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಶ್ರೀಮತಿ ಬಸಮ್ಮ ಚಿತ್ತರಗಿ ಗದಗ, ಶ್ರೀಮತಿ ರೇಷ್ಮಾ ಎನ್ ನದಾಫ್ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ, ಪಪಾಮತಿ ಇಂಡಿಯನ್ ಕ್ಯಾನ್ಸ್‌ರ್ ಸೊಸೈಟಿ ಗದಗ, ವಿರೇಶ ಮದಕಟ್ಟಿ ಐ.ಡಿ.ಎಸ್.ಪಿ ಡಾಟಾ ಮಾನ್ಯಜರ್ ಶಿವಕುಮಾರ ಬಗಾಡೆ, ಹಾಗೂ ಎಸ್.ವಿ.ಟಿ ಪ್ಯಾರ್ ಮೇಡಿಕಲ್ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 