ಧಾರವಾಡ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
World Environment Day celebrated at Manjunatheshwar English Medium School, Dharwad
ಲೋಕದರ್ಶನ ವರದಿ
ಧಾರವಾಡ 06 : ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಅದರಲ್ಲಿ ಪ್ರಮುಖವಾಗಿ ಈ ವರ್ಷ ನಾವು ಊಆಒಅ ಡಿ ಗ್ರೂಪ್ ನೌಕರರನ್ನು ಕರೆಸಿ ಅವರು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಮಕ್ಕಳು ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡುವಂತೆ ತಿಳಿಸಿಕೊಟ್ಟು ಆ ನೌಕರರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಹಾಗೆಯೇ ಪರಿಸರದ ಕುರಿತು ಹಲವಾರು ಸ್ಪರ್ಧೆಗಳನ್ನು ಏರಿ್ಡಸಲಾಗಿತ್ತು. ಮಕ್ಕಳು ಒಣಗಿದ ಎಲೆ ಮತ್ತು ಕಡ್ಡಿಗಳನ್ನು ಬಳಸಿ, ಧಾನ್ಯಗಳನ್ನು ಬಳಸಿ ವಿವಿಧ ಪ್ರಕಾರದ ಕಲಾಕೃತಿಗಳನ್ನು ರಚಿಸಿದ್ದರು. ಹಾಗೆಯೇ ಪರಿಸರದ ಕಲಾ ಚಿತ್ರಗಳನ್ನು ತಮ್ಮ ಸುಂದರವಾದ ಕೈ ಬರಹದಿಂದ ಕಲಾಚಿತ್ರ ಬರೆದಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಪ್ರಾಥಮಿಕ ಶಾಲೆಯ ಮಕ್ಕಳು ಓಷಧೀಯ ಸಸ್ಯಗಳ ವೇಷಧರಿಸಿ ಅವುಗಳ ಪ್ರಾಮುಖ್ಯತೆಯನ್ನು ಹೇಳಿ ಬಹುಮಾನ ಪಡೆದುಕೊಂಡರು.ಹಾಗೆಯೇ ಮಕ್ಕಳು ತಾವು ಬರೆದಿರುವ ಘೋಷಣೆಗಳನ್ನು ಹಿಡಿದು ಕ್ಯಾಂಪಸ್ ನಲ್ಲಿ ಓಡಾಡಿ ಎಲ್ಲರಿಗೂ ಪರಿಸರ ದಿನಾಚರಣೆಯ ಕುರಿತು ಅರಿವು ಮೂಡಿಸಿದರು.ಶಾಲೆಯ ಪ್ರಾಚಾರ್ಯರಾದ ಡಯಾನಜೋಗಿನ್ ಶಾಲೆಯ ಸಹ ಸಂಯೋಜಕರಾದ ನಿರ್ಮಲಾ ಪಾಟೀಲ್ , ಕಮಲಾಕ್ಷಿ ಸಣ್ಣಕ್ಕಿ ಹಾಗೂ ಪ್ರಿಯಾಂಕ ದೇಸಾಯಿ ಅವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಾಕ್ಷಿ ಮುತ್ತಣ್ಣವರ್ ನಿರೂಪಿಸಿ ವಂದಿಸಿದರು. ಪರಿಸರವನ್ನು ರಕ್ಷಣೆ ಮಾಡುವಂತೆ ದೀಪ್ತಿ ಚಿಕ್ಕೆರೂರ್ ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದನ್ನು ಸ್ವೀಕರಿಸಿ ಪಾಲಿಸುತ್ತೇವೆಂದು ಪ್ರತಿಜ್ಞೆ ಕೈಗೊಂಡರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 