ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
Multi-crore fraud: Adityaraj case transferred to CID, lookout notice issued against CEO, information
ಬೆಳಗಾವಿ : ಕೋಟ್ಯಾಂತರ ರೂ. ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆದಿತ್ಯರಾಜ್ ಕ್ಯಾಪಿಟಲ್ ಪ್ರಾವೆಟ್ ಲಿಮಿಟೆಡ್ ಮೇಲೆ ಎರಡು ದಿನಗಳಿಂದ ಕೆಪಿಐಡಿ ಮತ್ತು ಬರ್ಡ್ ಆ್ಯಕ್ಟ್ ಅಡಿ ದಾಳಿ ಮಾಡಿ ಸಂಸ್ಥೆಯ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಈ ಸಂಸ್ಥೆಯ 50 ಕೋಟಿ ಠೇವಣಿ ಮೀರಿದ್ದು, ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ ಇಂದಿಲ್ಲಿ ಹೇಳಿದರು.
ಶನಿವಾರ ಸಂಜೆ ತಮ್ಮ ಕಚೇರಿಯಲ್ಲಿ ಕರೆಯಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ಎರಡು ರೀತಿಯ ಕೆಲಸ ಮಾಡಿದೆ. ಹಣವನ್ನು ಸಂಗ್ರಹಿಸಿ ಎರಡು ರೀತಿಯಲ್ಲಿ ಬಳಕೆ ಮಾಡಲಾಗಿದೆ. ಇವರ ಬಳಿ ಯಾವುದೇ ರೀತಿಯ ಅನುಮತಿ ಇಲ್ಲ. ಆರ್ ಬಿಐನಲ್ಲಿ ನಿಯಮ ಪಾಲನೆ ಮಾಡಿಲ್ಲ. ತಿಂಗಳಿಗೆ ಶೇ. 5ರಷ್ಟು ಬಡ್ಡಿ ಕೊಡಿವ ಆಮೀಷವೊಡ್ಡಲಾಗಿದೆ.
ಠೇವಣಿದಾರ ಜೊತೆಗೆ ಎಲ್ ಎಫ್ ಎ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಶೇಕಡಾ ಐದರಷ್ಟು ಬಡ್ಡಿ, ಶೇಕಡಾ ಐದರಷ್ಟು ಅಸಲು ನೀಡುವ ಒಪ್ಪಂದವಾಗಿದೆ. ಒಪ್ಪಂದದಲ್ಲಿ ರಿಸ್ಕ್ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ನುಡಿದರು.
ಇದು ಒಂದು ಪಾಂಜಿ ಸ್ಕಿಂಗೆ ಈ ಪ್ರಕರಣ ಮಾದರಿಯಾಗಿದೆ. 7 ಸಾವಿರ ಜನ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಠೇವಣಿ ಹಣ ಎಲ್ಲಿ ಹೂಡಿಕೆ ಮಾಡ್ತಾರೆ ಎಂದು ಹೇಳಿಲ್ಲ. ಹಣ ಹೂಡಿಕೆ ಮಾಡಿದವರಿಗೆ ಚೆಕ್ ನೀಡಿದ್ದಾರೆ. ನಿನ್ನೆ ತಮಗೆ ಬಂದ ವರದಿ ಕಂದಾಯ ಅಪರ ಮುಖ್ಯ ಕಾರ್ಯಾದರ್ಶಿಗೆ ವರದಿ ಕಳುಸಿದ್ದೇನೆ ಎಂದು ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ ತಿಳಿಸಿದರು. ನನ್ನ ಆದೇಶದ ಮೇಲೆ ಎಸಿ ಶ್ರವಣ್ ನಾಯಕ್ ಅವರು ಸಹಕಾರ ಇಲಾಖೆಯವರು ಈ ಸಂಸ್ಥೆ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ಮೇಲೆ ದಾಳಿ ಮಾಡಲಾಗಿತ್ತು. ಅದು ತುಂಬ ಯಶಸ್ವಿ ದಾಳಿ ಆಗಿದೆ. ಪೊಲೀಸ್ ಆಯುಕ್ತರ ರಿಪೋರ್ಟ್ ಪಡೆದು ದಾಳಿ ಮಾಡಲಾಗಿದೆ ಎಂದು ವಿವರಿಸಿದರು.
ಇದೇ ವೇಳೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮಾತನಾಡಿ, ಈ ಸಂಸ್ಥೆಯ ಸಿಇಓ ಬಾಲರಾಜ್ ಮಾನೆ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಸಮೀಪದ ಎಲ್ಲಾ ಏರ್ ಪೋರ್ಟ್ ಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ಸದ್ಯ ಪರಾರಿಯಾಗಿದ್ದು, ದೇಶ ಬಿಟ್ಟು ಹೋಗುದಂತೆ ಕ್ರಮ ವಹಿಸಲಾಗಿದೆ ಎಂದು ನುಡಿದರು.
ಸಹಕಾರ ಇಲಾಖೆಯ ಅಧಿಕಾರಿಗಳ ದೂರಿನ ಅನ್ವಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ದಾಳಿ ಮಾಡೋವಾಗ ಕಂಪ್ಯೂಟರ್ ಫಾರ್ಮೆಟ್ ಮಾಡಿರೋದು ಪತ್ತೆಯಾಗಿದೆ.
ಆದಿತ್ಯರಾಜ್ ಸೇರಿದ ಮೂರು ಕಂಪನಿಯ ವಿರುದ್ಧ ಕೇಸ್ ಆಗಿದೆ. ಕಂಪನಿಯ ಸಿಇಓ ಬಾಲರಾಜ್ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.
ಆದಿತ್ಯರಾಜ್ ಕಂಪನಿ ಯಾವುದೇ ಅನುಮತಿ ಪಡೆದಿಲ್ಲ. ಠೇವಣಿ ಹಣಕ್ಕೆ ಶೇಕಡಾ ಐದರಷ್ಟು ಬಡ್ಡಿಯ ಕೋಡುವ ಭರವಸೆ ನೀಡಿದ್ದರು. ಈ ರೀತಿ ದೇಶದಲ್ಲಿ ನೂರಾರು ಕೇಸ್ ಆಗಿವೆ. 6500 ಹೂಡಿಕೆದಾರರ ಬಗ್ಗೆ ಮಾಹಿತಿ ಇದೆ.
ಸಿಐಡಿಗೆ ಕೇಸ್ ವರ್ಗವಾಣೆ ಮಾಡಲು ಪತ್ರ ಬರೆಯಲಿದೆ. ಮೂರು ಕಡೆ ದಾಳಿ ಮಾಡಿ ಲ್ಯಾಪ್ಟಾಪ್ ಸೀಜ್ ಮಾಡಿದ್ದೇವೆ.ಶಿವಂ ಅಸೋಸಿಯೇಟ್ ದಾಳಿ ಬಳಿಕ ಆದಿತ್ಯರಾಜ್ ಕ್ಯಾಪಿಟಲ್ ನವರು ಎಚ್ಚತ್ತುಕೊಂಡಿದ್ದಾರೆ.
ಸಾಕ್ಷ್ಯ ನಾಶದ ಪ್ರಯತ್ನವನ್ನು ಮಾಡಿದ್ದಾರೆ. ಕಂಪನಿಯ ಸಿಬ್ಬಂದಿ ಯಾವುದೇ ರೀತಿಯ ಸಹಾಕರ ನೀಡುತ್ತಿಲ್ಲ ಎಂದು ತಿಳಿಸಿದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 