ಪರಿಸರ ಸಂರಕ್ಷಣೆಯ ಕೆಲಸ ಆಗಲಿ: ಮಂಜುನಾಥ
ಹೂವಿನ ಹಡಗಲಿ 10: ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯ ಕೆಲಸ ಆಗಬೇಕಾಗಿದೆ ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಸೋಮವಾರ ತಾಲೂಕು ಗೃಹರಕ್ಷಕ ದಳದವರು ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಿಸಿ ನೆಟ್ಟು ಅವರು ಮಾತನಾಡಿದರು. ಗಿಡಮರಗಳಿದ್ದರೆ ಮಳೆ ಪ್ರಮಾಣ ಹೆಚ್ಚಾಗುತ್ತದೆ. ಶಿಕ್ಷಕರು ಬೋಧನೆ ಜೊತೆಗೆ ನೆಲ ಜಲ ಉಳಿಸಿ ಬೆಳೆಸುವ ಪರಿಪಾಠವನ್ನು ಮಕ್ಕಳಲ್ಲಿ ಬೆಳೆಸಿರಿ ಎಂದು ತಿಳಿಸಿದರು. ಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ, ಗೃಹರಕ್ಷಕದಳದ ಶಂಕರ್ ರಾವ್ ಮಾತನಾಡಿದರು.
ಮುಖ್ಯ ಶಿಕ್ಷಕ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ್ ಮಲ್ಕಿಒಡೆಯರ್ ನಿರ್ವಹಿಸಿದರು. ಗೃಹರಕ್ಷಕ ದಳದ ರಾಜಪೀರ್ ಕೋಡಿಹಳ್ಳಿ ಮಲ್ಲಿಕಾರ್ಜುನ, ಬಸೆಟ್ಟಿ ವೀರಭದ್ರ್ಪ, ಸುಬಾನ್ ಸಾಬ್,ಕೆ ಕೊಟ್ರೇಶ್,ಎ.ಗುರುರಾಜ, ಅನ್ವರ್ ಭಾಷಾ, ಹೆಚ್.ವೀರೇಶ್ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು. ಶಾಲಾ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು