ಹೂವಿನ ಹಡಗಲಿ

ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ’

ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ’

ಲೋಕದರ್ಶನ ವರದಿ   

ಹೂವಿನಹಡಗಲಿ   11:  ’ಹೆಲ್ಮೆಟ್ ಧರಿಸದವ ರನ್ನು ಹಿಡಿದು ದಂಡ ವಿಧಿಸುವುದು ಪೊಲೀಸರ ಉದ್ದೇಶವಲ್ಲ, ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಆಮೂಲ್ಯ ಜೀವ ಕಾಪಾಡಿಕೊಳ್ಳಲಿ ಎಂಬ ಸದುದ್ದೇಶ ಪೊಲೀಸ್ ಇಲಾಖೆಯದ್ದಾಗಿದೆ ಎಂದು ಪಿಎಸ್‌ಐ ಮಣಿಕಂಠ್ ಹೇಳಿದರು.ಪಟ್ಟಣದಲ್ಲಿ ಪೊಲೀಸ್ ಇಲಾಖೆ ಯಿಂದ ಶುಕ್ರವಾರ  ಪೊಲೀಸ್ ಠಾಣೆ ಮುಂಭಾಗ,ಶಾಸ್ತ್ರೀಯ ವೃತ್ತ, ಹಳೆ ಬಸ್ ನಿಲ್ದಾಣದಲ್ಲಿ ಬೈಕ್ ತಡೆದು ಹೆಲ್ಮೆಟ್ ಜಾಗೃತಿ ಮೂಡಿಸಲಾಯಿತು. ಅಪಘಾತ ಸಂದರ್ಭದಲ್ಲಿ ತಲೆಗೆ ಪೆಟ್ಟು ಬೀಳುವುದರಿಂದ ಹೆಚ್ಚಾಗಿ ಜನರು ಪ್ರಾಣ ಕಳೆದುಕೊಳ್ಳತ್ತಿದ್ದಾರೆ . ದ್ವಿಚಕ್ರ ವಾಹನ ಚಾಲನೆಯಲ್ಲಿ ಹೆಲ್ಮೆಟ್ ಧರಿಸಿ ಪ್ರಾಣ ಕಾಪಾಡಿಕೊಳ್ಳಿ ಎಂದರು. ಇದೇ ವೇಳೆ ಎ ಎಸ್ ಐ ನಂದಿನಿ, ಕಾನಸ್ಟೆಬಲ್  ಗುರುಬಸವರಾಜ, ಪರಶುರಾಮ, ಮಲ್ಲೇಶ, ಖಲಂದರ ಇದ್ದರು. 


ಸುದ್ದಿ ಓದಿ