ಪ್ರತಿ ದಿನ ಸ್ವಚ್ಛ ಪರಿಸರದ ಕುರಿತು ಯೋಚನೆ ಮಾಡಬೇಕು -ನ್ಯಾಯಾಧೀಶರಾದ ಶ್ರೀಶೈಲಜಾ ಎಚ್‌.ವಿ.

ಪ್ರತಿ ದಿನ ಸ್ವಚ್ಛ ಪರಿಸರದ ಕುರಿತು ಯೋಚನೆ ಮಾಡಬೇಕು -ನ್ಯಾಯಾಧೀಶರಾದ   ಶ್ರೀಶೈಲಜಾ ಎಚ್‌.ವಿ. We should think about a clean environment every day - Justice Srishailaja H.V.

ಲೋಕದರ್ಶನ ವರದಿ 

       ಹಾವೇರಿ  06: ನಾವು ಪರಿಸರ ದಿನದಂದು ಮಾತ್ರ ಆಚರಣೆ ಮಾಡದೇ ಪ್ರತಿ ದಿನವೂ  ಸ್ವಚ್ಛ ಪರಿಸರದ ಕುರಿತು  ಯೋಚನೆ ಮಾಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀಶೈಲಜಾ ಎಚ್‌.ವಿ. ಅವರು ಹೇಳಿದರು. 

ಕಳ್ಳಿಹಾಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಶುಕ್ರವಾರ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ  ಆಯೋಜಿಸಲಾದ ವಿಶ್ವ ಪರಿಸರ ದಿನದ  ಅಂಗವಾಗಿ ಅರಣ್ಯೀಕರಣ  ಹಾಗೂ ಸರೋವರ ಪುನರುಜ್ಜೀವನ,  ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ವರದಕ್ಷಿಣೆ ನಿಷೇಧ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಕಾಲೇಜಿನ ವತಿಯಿಂದ 250 ಸಸಿಗಳನ್ನು ಕಾಲೇಜಿನ ಸುತ್ತಮುತ್ತಲೂ  ನೆಡಲಾಗುತ್ತಿದೆ.  ಎಲ್ಲರೂ ತಮ್ಮ ತಮ್ಮ ಮನೆಯ ಮುಂದೆ ಗಿಡ-ಮರಗಳನ್ನು ಬೆಳಸಬೇಕು.  ಕರ್ನಾಟಕ ರಾಜ್ಯದಾದ್ಯಂತ ಐದು ಕೋಟಿಗೂ ಅಧಿಕ ಸಸಿಗಳನ್ನು  ನಡೆಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನವಿದೆ. ಜಿಲ್ಲೆಯಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ. ಹಾಗಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು. 

ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಹಾಗೂ ಇತರರಿಗೆ  ಜಾಗೃತಿ ಮೂಡಿಸಬೇಕು.  ಕಾನೂನಿನ ಸಲಹೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸಬಹುದೆಂದು  ಸಲಹೆ ನೀಡಿದರು. 

ಕಳ್ಳಿಹಾಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಡಿ.ಟಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪರಿಸರವಾದಿ   ಮಾಧುರಿ ದೇವಧರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ   ಜಯಶ್ರೀ ಪಾಟೀಲ ಇತರರು ಉಪಸ್ಥಿತರಿದ್ದರು.