ಲೋಪದೋಷಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು - ರಾಘವೇಂದ್ರ ರಾವ್

ಲೋಪದೋಷಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು - ರಾಘವೇಂದ್ರ ರಾವ್ We should act transparently without allowing for loopholes - Raghavendra Rao

ಶಿರಹಟ್ಟಿ 06:  ಮತದಾರರ ಪಟ್ಟಿಯು ಚುನಾವಣೆ ಪ್ರಕ್ರಿಯೆಯ ಮೂಲಾಧಾರ ಆಗಿರುವುದರಿಂದ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ರಾಘವೇಂದ್ರ ರಾವ್ ಹೇಳಿದರು.ಅವರು ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಶುಕ್ರವಾರ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಆಡಳಿತದ ವತಿಯಿಂದ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಿಎಲ್ ಮತ್ತು ಬಿಎಲ್‌ಎ ಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವೇಳೆಯಲ್ಲಿ ಸುಜಾತಾ ದೊಡ್ಡಮನಿ, ಶಂಕರ ಮರಾಠೆ ಮಾತನಾಡುತ್ತಾ.

ಅಧಿಕಾರಿಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಅರ್ಹ ಮತದಾರರ ಸೇರೆ​‍್ಡ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಮೃತರನ್ನು ಪಟ್ಟಿಯಿಂದ ಕೈಬಿಡುವುದು. ಇನ್ನಿತರ ವಿಶೇಷಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಪರಿಶುದ್ಧವಾದ ಮತದಾರರ ಪಟ್ಟಿ ತಯಾರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕೆ. ರಾಘವೇಂದ್ರ ರಾವ್, ಬಿಜೆಪಿ ಮುಖಂಡ ಶಂಕರ ಮರಾಠ, ಎಚ್ .ಡಿ. ಮಾಗಡಿ, ನಾಗರಾಜ ಲಕ್ಕುಂಡಿ. ತಿಮ್ಮರಡ್ಡಿ ಮರಡ್ಡಿ, ಅಕ್ಬರ ಯಾದಗಿರಿ, ಶಿರಸ್ತೆದಾರ ಸಂತೋಷ ಆಸ್ಕಿ, ಕಂದಾಯ ನೀರೀಕ್ಷಕ ಬಸವರಾಜ ಕಾಂತ್ರಾಳ, ತಾಲೂಕು ಮಾಸ್ಟರ್ ಟ್ರೇನರ್ ಕೆ.ಎಚ್‌. ಹೊಂಬಳಮಠ ಮುಂತಾದವರು ಇದ್ದರು.