ನಾವು ಉಸಿರಾಡಬೇಕೆಂದರೆ ಹಸಿರು ಇರಲೇ ಬೇಕು. ಆ ಹಸಿರಿಗೆ ನಾವು ಕಾರಣರಾಗಬೇಕು.; ಎಕ್ಸಲಂಟ್ ವಿಜ್ಞಾನ ಪ ಪೂ ಕಾಲೇಜಿನಲ್ಲಿ ಸಂಭ್ರಮದ ವಿಶ್ವ ಪರಿಸರ ದಿನ
We need greenery to breathe. We should be responsible for that greenery.; World Environment Day cele
ಲೋಕದರ್ಶನ ವರದಿ
ವಿಜಯಪುರ 05 : ಮನೆಗೊಂದು ಮರ ನೀಗುವುದು ಬರಎನ್ನುವುದನ್ನುಅರಿತುಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ಸಹ ಮರ ಬೆಳೆಸುವಲ್ಲಿ ನಿರತನಾಗಿದ್ದೇಆದಲ್ಲಿ ಪರಿಸರ ಸಂರಕ್ಷಣೆಯಜೊತೆಗೆ ಶುದ್ಧವಾದಆಮ್ಲಜನಕ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಏಕೆಂದರೆಇಂದು ನವು ಉಸರಿಡಾಬೇಕಾದರೆ ಹಸಿರು ಇರಲೇ ಬೇಕು. ಹಿಸಿರಿಲ್ಲದೆ ಉಸಿರಿಲ್ಲ. ಅದಕ್ಕಾಗಿ ನಾವು ಹಸಿರು ಪರಿಸರ ನಿರ್ಮಿಸುವಕಾರ್ಯ ಮಾಡಬೇಕು. ಈ ಕಾರಣದಿಂದಾಗಿಯೇ ನಮ್ಮ ಮನೆಯನ್ನುರಕ್ಷಿಸುವುದು ಎಷ್ಟು ಮುಖ್ಯವಾಗುತ್ತದೆಯೋ ಪರಿಸರವನ್ನುರಕ್ಷಣೆ ಮಾಡುವುದುಅದಕ್ಕಿಂತಲೂ ಮುಖ್ಯವಾಗಿರುತ್ತದೆ. ಅದನ್ನು ನಾವೆಲ್ಲರೂ ತಪ್ಪದೇ ಪಾಲನೆ ಮಾಡೋಣ ಎಂದು ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟು ಮಾತನಾಡಿದ ಅವರು; ಇಂದು ದೇಶದ ದೊಡ್ಡದೊಡ್ಡ ನಗರಗಳು ಕಾಂಕ್ರಿಟ್ ಕಾಡುಗಳಾಗಿ ಬೆಳೆಯುತ್ತಿವೆಯೇ ಹೊರತು ಆರೋಗ್ಯಕರ ನಗರಗಳಾಗಿ ನಿರ್ಮಾಣವಾಗುತ್ತಿಲ್ಲ. ದೆಹಲಿಯಂತಹ ರಾಷ್ಟ್ರರಾಜಧಾನಿಯೂ ಇಂದು ಕಲುಶಿತ ವಾತಾವರಣದ ಗೂಡಾಗಿ ಮಾರ್ಪಟಟಿದೆ. ಶುದ್ಧ ಗಾಳಿಯನ್ನು ಉಸಿರಾಡುವುದು ಸಹ ಕಷ್ಟಕರವಾಗಿದೆ. ಹೀಗಾಗಿ ಅಲ್ಲಿನ ಜನಗಳು ಕಷ್ಟ ಪಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನುಇಡಬೇಕಾದ ಅನಿವಾರ್ಯತೆ ನಮಗೆಲ್ಲ ಎದುರಾಗಿದ್ದು ಅದಕ್ಕನುಗುಣವಾಗಿ ಪರಿಸರ ಸಂರಕ್ಷಣೆಯ ಜೊತೆಗೆ ಅರಣ್ಯ ವರ್ಧನೆಗೂ ನೆರವಾಗಬೇಕಿದೆ ಎಂದು ಹೇಳಿದರು.
ಈ ಬಾರಿ ನಡೆದಐಪಿಎಲ್ ಪಂದ್ಯಾವಳಿಗಳಲ್ಲಿ ಒಬ್ಬ ಬೌಲರ್‌ರನ್ ರಹಿತವಾದ ಎಸೆತವನ್ನು ಹಾಕಿದರೆಅದಕ್ಕೆ ಪ್ರತಿಯಾಗಿ ಐಪಿಎಲ್ ಆಯೋಜಕರು ಹತ್ತೊಂಬ್ಬತ್ತು ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವಯೋಜನೆ ಮಾಡಿದ್ದುಒಂದು ವಿಶೇಷ. ಇದುಒಂದು ವಿನೂತನವಾದ ಪ್ರಯೋಗವಾಗಿದ್ದು ನಾವು ಸಹ ಇಂಥಹ ಐಡಿಯಾಗಳನ್ನು ಬಳಸಿಕೊಂಡು ನಮ್ಮ ಸುತ್ತ ಮುತ್ತಲು ಬಳಕೆಯಾಗದೇ ಉಳಿದಿರುವ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸುವ ಕಾಯಕ ಮಾಡಬೇಕು. ವಾತಾವರಣದಲ್ಲಿ ಅತಿಯಾಗಿ ದೊರೆಯುತ್ತಿರುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ತಗ್ಗಿಸಿ ಶುದ್ಧ ಆಮ್ಲಜನಕ ಸಿಗುವಂತೆ ಹೆಚ್ಚು ಹೆಚ್ಚು ಹಸಿರುಮಯ ವಾತವರಣವನ್ನು ನಿರ್ಮಾಣ ಮಾಡಬೇಕು.
ಅದರ ಜೊತೆಯಲ್ಲಿ ಪರಿಸರವನ್ನು ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಸಹ ಕಡಿಮೆ ಮಾಡಿ ಪರಿಸರದಜೊತೆಯಲ್ಲಿ ಪಶುಗಳ ಜೀವವನ್ನು ಉಳಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು. ಅದರಲ್ಲೂ ವಿದ್ಯಾರ್ಥಿಳು ಇದರ ಮಹತ್ವವನ್ನು ತಾವೂ ಅರಿತುಕೊಂಡು ಇನ್ನೊಬ್ಬರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 