ಕೃಷ್ಣಾ ನದಿಯ ನೀರಿಮಟ್ಟ ಏರಿಕೆ

Water level of Krishna River rises

ಕೃಷ್ಣಾ ನದಿಯ ನೀರಿಮಟ್ಟ ಏರಿಕೆ 

ಮಾಂಜರಿ 21: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ ಹಾಗೂ ನದಿ ನೀರಿನ ಕೋರತೆಯಿಂದಾಗಿ ಬೆಸತ್ತ ಗಡಿಭಾಗದ ಜನತೆಗೆ ಕಳೆದ 2-3 ದಿನಗಳಿಂದ  ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗಲಿ ಜಿಲ್ಲೆಯಲ್ಲಿ ಹಾಗೂ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಗಡಿಯ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟ ಎರಿಕೆ ಯಾಗಿದ್ದು, ರೈತ ಸಮುದಾಯದವರ ಜೋತೆಗೆ ಸಾರ್ವಜನಿಕರಲ್ಲಿ ಮಳೆ ಹರ್ಷ ಮೂಡಿಸಿದೆ.  

 ಕರ್ನಾಟಕ-ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ಕೋನೆಯ ಬ್ಯಾರೇಜ ಎಂದು ಗುರುತಿಸಲ್ಪಡುವ ರಾಜಾಪೂರ ಬ್ಯಾರೇಜ ಮಳೆಯಿಂದಾಗಿ  ತುಂಬಿ ತುಂಬಿ ಹರಿಯುತ್ತಿರುವುದರಿಂದ ನೀರು ರಾಜ್ಯಕ್ಕೆ ಹರಿದುಬರುತ್ತಿದ್ದು, ಕೃಷ್ಣಾ ನದಿಯ ನೀರಿಮಟ್ಟ ಏರಿಕೆ ಯಾಗಿದೆ, ಇದರಿಂದಾಗಿ ರಾಜ್ಯದ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಕಲ್ಲೋಳ, ಯಡೂರ, ಮಾಂಜರಿ, ಅಂಕಲಿ, ಚಂದೂರ, ಇಂಗಳಿ ಗ್ರಾಮಗಳ ನದದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.   

ಕಳೆದ 8 ದಿನಗಳ ಕೃತ್ತಿಕಾ ಮಳೆ ಸುರಿಯುತ್ತಿರುವುದರಿಂದ ನದಿಗಳ ನೀರಿನ ಮಟ್ಟ ಎರಿಕೆ ಕಂಡು ರೈತರು ಸಂತಸ ವ್ಯಕ್ತ ಪಡೆಸುತ್ತಿದ್ದಾರೆ.