ಕೃಷ್ಣಾ ನದಿಯ ನೀರಿಮಟ್ಟ ಏರಿಕೆ
Water level of Krishna River rises
ಕೃಷ್ಣಾ ನದಿಯ ನೀರಿಮಟ್ಟ ಏರಿಕೆ
ಮಾಂಜರಿ 21: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ ಹಾಗೂ ನದಿ ನೀರಿನ ಕೋರತೆಯಿಂದಾಗಿ ಬೆಸತ್ತ ಗಡಿಭಾಗದ ಜನತೆಗೆ ಕಳೆದ 2-3 ದಿನಗಳಿಂದ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗಲಿ ಜಿಲ್ಲೆಯಲ್ಲಿ ಹಾಗೂ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಗಡಿಯ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟ ಎರಿಕೆ ಯಾಗಿದ್ದು, ರೈತ ಸಮುದಾಯದವರ ಜೋತೆಗೆ ಸಾರ್ವಜನಿಕರಲ್ಲಿ ಮಳೆ ಹರ್ಷ ಮೂಡಿಸಿದೆ.
ಕರ್ನಾಟಕ-ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ಕೋನೆಯ ಬ್ಯಾರೇಜ ಎಂದು ಗುರುತಿಸಲ್ಪಡುವ ರಾಜಾಪೂರ ಬ್ಯಾರೇಜ ಮಳೆಯಿಂದಾಗಿ ತುಂಬಿ ತುಂಬಿ ಹರಿಯುತ್ತಿರುವುದರಿಂದ ನೀರು ರಾಜ್ಯಕ್ಕೆ ಹರಿದುಬರುತ್ತಿದ್ದು, ಕೃಷ್ಣಾ ನದಿಯ ನೀರಿಮಟ್ಟ ಏರಿಕೆ ಯಾಗಿದೆ, ಇದರಿಂದಾಗಿ ರಾಜ್ಯದ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಕಲ್ಲೋಳ, ಯಡೂರ, ಮಾಂಜರಿ, ಅಂಕಲಿ, ಚಂದೂರ, ಇಂಗಳಿ ಗ್ರಾಮಗಳ ನದದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಕಳೆದ 8 ದಿನಗಳ ಕೃತ್ತಿಕಾ ಮಳೆ ಸುರಿಯುತ್ತಿರುವುದರಿಂದ ನದಿಗಳ ನೀರಿನ ಮಟ್ಟ ಎರಿಕೆ ಕಂಡು ರೈತರು ಸಂತಸ ವ್ಯಕ್ತ ಪಡೆಸುತ್ತಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 