ಕೆ.ಎಮ್‌.ಜಾನಕಿ ಅವರು ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಭೇಟಿ

ಕೆ.ಎಮ್‌.ಜಾನಕಿ ಅವರು ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಭೇಟಿ K.M. Janaki visits Dr. D.R. Bendre National Memorial Trust

ಲೋಕದರ್ಶನ ವರದಿ 

ಬೆಳಗಾವಿ 07 :  ಪ್ರಾದೇಶಿಕ ಆಯುಕ್ತರಾಗಿರುವ ಕೆ.ಎಮ್‌.ಜಾನಕಿ ಅವರು ಇಂದು ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಸೌಹಾರ್ದದ ಭೇಟಿ ನೀಡಿ, ಗ್ರಂಥಾಲಯ, ಬೇಂದ್ರೆ ದರ್ಶನ-ಪ್ರದರ್ಶನಾಲಯ, ಆಡಳಿತ ಕಚೇರಿ ಹಾಗೂ ವರಕವಿ ಡಾ.ದ.ರಾ.ಬೇಂದ್ರೆ ನಿವಾಸ ವೀಕ್ಷಿಸಿದರು. ಟ್ರಸ್ಟ್‌ ಅಧ್ಯಕ್ಷರಾದ ಡಾ. ಸರಜೂ ಕಾಟ್ಕರ್ ಅವರು ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಕೆ.ಎಚ್‌.ಚನ್ನೂರ, ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಟ್ರಸ್ಟಿನ ಸದಸ್ಯರಾದ ಡಾ. ಶರಣಮ್ಮ ಗೊರೆಬಾಳ, ಗಾಯಕಿ ಡಾ.ರೋಹಿಣಿ ಗಂಗಾಧರ ಹಾಗೂ ಟ್ರಸ್ಟ್‌ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ಉಪಸ್ಥಿತರಿದ್ದರು.