ನವದೆಹಲಿ 21: ಜಗತ್ತನ್ನು ಕಾಡಿದ್ದ ಕೋವಿಡ್ ಸೋಂಕಿನ ಪ್ರಮಾಣ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಏರಿಕೆಯಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಾದ ಥಾಯ್ಲೆಂಡ್, ಹಾಂಕಾಂಗ್, ಸಿಂಗಾಪುರ ಹಾಗೂ ಚೀನಾದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ.
ಈ ಕೋವಿಡ್ ಹೆಚ್ಚಳಕ್ಕೆ ಹೊಸ ರೂಪಾಂತರಿ ಕಾರಣ ಎಂದು ತಜ್ಞರು ಹೇಳಿದ್ದು, 2024ರಲ್ಲಿ ಕಾಣಿಸಿಕೊಂಡಿದ್ದ ಜೆ-1 ರೂಪಾಂತರಿಯ ಉಪ ತಳಿಗಳಾದ ಎಲ್ಎಫ್-7, ಎನ್ಬಿ- 1.8 ತಳಿಗಳು ಸೋಂಕು ಹರಡುತ್ತಿವೆ ಎಂದು ಹೇಳಲಾಗಿದೆ.
ಅತಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳಾದ ಸಿಂಗಾಪುರ, ಥಾಯ್ಲೆಂಡ್ ಮತ್ತು ಹಾಂಕಾಂಗ್ಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತದೆ. ಸಿಂಗಾಪುರದಲ್ಲಿ ಕೋವಿಡ್ ಸೋಂಕುಗಳ ಪ್ರಮಾಣ 14,200ಕ್ಕೆ ಏರಿಕೆಯಾಗಿದೆ. ಅಲ್ಲದೇ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ.
ಭಾರತದಲ್ಲಿ ಕೇವಲ 257 ಕೋವಿಡ್ ಪ್ರರಣಗಳಿದ್ದು, ಇದು ಹರಡುವ ಯಾವುದೇ ಭೀತಿ ಇಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ರೂಪಾಂತರಿಯನ್ನು
ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೊಷಿಸದೇ ಇರುವುದರಿಂದ ಹೆಚ್ಚು ಆತಂಕ ಇಲ್ಲ ಎಂದು ತಜ್ಞರು ಹೇಳಿದ್ದಾರೆ.