ನಿಪ್ಪಾಣಿ ಬಳಿ ಟೊಲ್ ಪ್ಲಾಜಾಕ್ಕೆ ಬೆಂಕಿ : ಲಾರಿಯ ಇಂಧನ ಟ್ಯಾಂಕ್ ಸ್ಫೋಟ

Fire at toll plaza near Nippani: Fuel tank of lorry exploded

ಬೆಳಗಾವಿ : ಟೋಲ್ ನಾಕಾ ಒಂದಕ್ಕೆ ಬೆಂಕಿ ಬಿದ್ದ ಪರಿಣಾಮ ಎರಡು ಟೊಲ್ ಹಣ ಸಂಗ್ರಹದ ಕೊಠಡಿಗಳಿಗೆ ಬೆಂಕಿ ತಗಲಿ ಅಪಾರ ನಷ್ಟ ಉಂಟಾದ ಘಟನೆ ಗಡಿಗೆ ಹೊಂದಿಕಿಂಡಿರುವ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ನಡೆದಿದೆ.


    ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ರ ನಿಪ್ಪಾಣಿ ಹೊರ ವಲಯದಲ್ಲಿರುವ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, 

   ಲಾರಿ ಒಂದು ಹಾಯ್ದು ಹೋಗುವ ವೇಳೆ  ವೇಳೆ ಡಿಸೇಲ್ ಟ್ಯಾಂಕ್ ಸ್ಫೋಟ ಆಗಿ ಟೊಲ್ ನಾಕಾಕ್ಕೆ ಬೆಂಕಿ ಹೊತ್ತಿಕೊಂಡಿದೆ. 

ಹಣ ಸಂಗ್ರಹ ಮಾಡುವ ಎರಡು ಕ್ಯಾಬಿನ್ ಗೆ ಬಕಿ ಆವರಿಸಿಕೊಂಡಿದೆ. ಬೆಂಕಿ ಆವರಿಸುತ್ತಿದ್ದಂತೆ ಕೂಡಲೇ ಸ್ಥಳದಿಂದ ಓಡಿ ಹೋದ ಸಿಬ್ಬಂದಿಗಳು.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನಿಪ್ಪಾಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.