ಗದಗ 30: ಗದಗ ಜಿಲ್ಲೆಯ ಹಾಗೂ ರೋಣ ತಾಲೂಕುಗಳನ್ನು ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದಡಿ ಗುರುತಿಸಲಾಗಿದ್ದು, ಈ ತಾಲೂಕುಗಳಲ್ಲಿ ಜಲ ಸಂರಕ್ಷಣೆ, ಸಂವರ್ಧನರ ಹಾಗೂ ನೀರಿನ ಇಂಗಿಸುವಿಕೆ ಕುರಿತಂತೆ ಜಿ.ಪಂ ನಿಂದ ಗ್ರಾಮೀಣ ಪ್ರದೇಶದಲ್ಲಿ ಜನಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ನಗರಾಭಿವೃದ್ಧಿ ಕೋಶದ ಮೂಲಕ ಜಲ ಸಂವರ್ಧನೆ, ಜಲಸಂರಕ್ಷಣೆ ಮಳೆ ನೀರು ಸಂಗ್ರಹ, ಹಸುರೀಕರಣ ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುತ್ತಿದೆ ಎಂದು ಜಿ,ಪಂ ಯೋಜನಾ ನಿದರ್ೇಶಕ ಟಿ. ದಿನೇಶ ನುಡಿದರು.
ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಸೋಮವಾರ ದಿ. 29ರಂದು ಏರ್ಪಡಿಸಿದ ಗದಗ ಮತ್ತು ರೋಣ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಜಲಶಕ್ತಿ ಅಭಿಯಾನದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಗದಗ ಹಾಗೂ ರೋಣ ತಾಲೂಕಿನಲ್ಲಿ ಅಂತರ್ಜಲ ಇರುವಿಕೆ ಮಟ್ಟ ಆಧರಿಸಿ ಇವುಗಳನ್ನು ಆಯ್ಕೆ ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಆರೊಗ್ಯ, ಆಯುಷ ಇಲಾಖೆಗಳು ಸಮನ್ವಯತೆ ಮೂಲಕ ಹಾಗೂ ಅಂಗನವಾಡಿ ಕಾರ್ಯಕತರ್ೆಯರ ಮೂಲಕ ಜಲಶಕ್ತಿ ಅಭಿಯಾನದ ಕಾರ್ಯಕ್ರಮದ ಕುರಿತು ಸಾರ್ವಜನಿಕ ಜಾಗೃತಿಯನ್ನು ಮೂಡಿಸಲು ದಿನೇಶ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಸುರೇಶ, ಉಪ ಜಿಲ್ಲಾ ಶಿಕ್ಷಣಾಧಿಕಾರಿ ಉಮೇಶ ಹಾಗೂ ವಿವಿಧ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.