ರಾತ್ರೋರಾತ್ರಿ 250 ಅಡಿಕೆ ಗಿಡಗಳುನ್ನು ಕಡಿದು ಪರಾರಿಯಾಗಿದ್ದ ದುಷ್ಕರ್ಮಿಗಳು

The criminals who cut down 250 areca trees overnight and fled

ಮುಂಡಗೋಡ 10 :  ತಾಲೂಕಿನ ನಂದಿಪುರ ಗ್ರಾಮದಲ್ಲಿ ರೈತನ ಅಡಿಕೆ ತೋಟವನ್ನು ಯಾರು ರಾತ್ರೋರಾತ್ರಿ ದುಷ್ಕರ್ಮಿಗಳು 250 ಅಡಿಕೆ ಗಿಡಗಳುನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ. ತಾಲೂಕಿನ ಕಾತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಪುರ ಗ್ರಾಮದ ರತ್ನ ಬಸವರಾಜ್ ಓಣಿಕೇರಿ  ಎಂಬವರಿಗೆ  ಗದ್ದೆ ಸೇರಿದೆ.

ತಾಲೂಕಿನ ಕಾತೂರ ಪಂಚಾಯತ್ ವ್ಯಾಪ್ತಿಯ ಸಿಂಗನಳ್ಳಿ ಗ್ರಾಮದ ಸರ್ವೇ ನಂಬರ್ 35 ಅ ರಲ್ಲಿರುವ ಮೂರು ಎಕರೆಯಲ್ಲಿ 1800 ಅಡಿಕೆ ಗಿಡಗಳನ್ನು ನೆಡಲಾಗಿದೆ. ಬುಧವಾರ ರಾತ್ರೋರಾತ್ರಿ  ಅಡಿಕೆ ತೋಟಕ್ಕೆ ಹೋಗಿ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿ ನಾಶ ಪಡಿಸಿ ಹೋಗಿದ್ದಾರೆ. ರೈತ ಗುರುವಾರ ಬೆಳಿಗ್ಗೆ ಗದ್ದೆಗೆ ಹೋಗಿ ನೋಡಿದಾಗ ಅಡಿಕೆ ಗಿಡಗಳನ್ನು  ನೆಲಕ್ಕೆ ಉರುಳಿದವು. ಇದರಿಂದ ಅಪಾರ ನಷ್ಟವಾಗಿದೆ ಎಂದು ರೈತ ಬಸವರಾಜ ಅವರು ತಿಳಿಸಿದ್ದಾರೆ.

ಈ ಕುರಿತು ಮುಂಡಗೋಡ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.