ಶ್ರೀ ಆಂಜನೇಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ

Kalasarohana program of Sri Anjaneya temple

ಬ್ಯಾಡಗಿ 11: ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ನೆರವೇರಿತು. 

ನೆಗಳೂರಿನ ಹಿರೇಮಠದ ಶ್ರೀ ಗುರು ಶಾಂತೇಶ್ವರ ಶಿವಯೋಗಿ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, "ದೇವಸ್ಥಾನ, ಮಠ ಮತ್ತು ಮಂದಿರಗಳು ಮೌಲ್ಯಗಳ ಪ್ರತೀಕವಾಗಿದ್ದು, ಇವು ಮನುಷ್ಯರಿಗೆ ಮೌಲ್ಯಯುತ ಹಾಗೂ ಆದರ್ಶ ಮಯ ಜೀವನ ನಡೆಸಲು ಸಹಕಾರಿಯಾಗಿವೆ" ಎಂದು ಪ್ರತಿಪಾದಿಸಿದರು."ದೇವಸ್ಥಾನದ ಗೋಪುರದ ದರ್ಶನದಿಂದ ಸಮೃದ್ಧಿ ಹಾಗೂ ಕಳಶದಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ದರ್ಶನವಾಗುತ್ತದೆ. ಇವುಗಳನ್ನು ನಿತ್ಯವೂ ದರ್ಶಿಸುವುದರಿಂದ ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಅಲ್ಲದೆ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಶಕ್ತಿ ವೃದ್ಧಿಯಾಗುತ್ತದೆ" ನಾವೆಲ್ಲರೂ ಭಾರತೀಯರು ನಮ್ಮ ದೇಶದಲ್ಲಿ ದೇವರಿಗೆ ವಿಶೇಷ ಸ್ಥಾನಮಾನವನ್ನು ಕೊಟ್ಟಿದ್ದೇವೆ ಅದರಂತೆ ದೇಶದಲ್ಲಿ ಯಾವುದೇ ಪಕ್ಷಗಳು ಬಂದರೂ ದೇವಸ್ಥಾನಗಳಿಗೆ ಅನುದಾನವನ್ನು ನೀಡುವಲ್ಲಿ ಲೇಟ್ ಆಗುವುದಿಲ್ಲ ದೇವಸ್ಥಾನ ಶಬ್ದ ಭಕ್ತಿ ಕೇಂದ್ರವಾಗಿದ್ದು ನಮ್ಮ ದೇಶದಲ್ಲಿ ಶಾಲೆಗಳಿಗಿಂತ ಹೆಚ್ಚು ದೇವಸ್ಥಾನಗಳು ಹೊಂದಿರುತ್ತವೆ ಎಂದರು.  

ಸಮಾರಂಭ ಉದ್ಘಾಟಿಸಿದ ಶಾಸಕ ಬಸವರಾಜ ಶಿವಣ್ಣನವರ  ಮಾತನಾಡಿ, ಕಳೆದ ಬಾರಿ ಶಾಸಕನಾಗಿದ್ದಾಗ 15 ಲಕ್ಷ ಮಂಜೂರು ಮಾಡಿದ್ದು ಈ ಬಾರಿ 10 ಲಕ್ಷ ವೆಚ್ಚದಲ್ಲಿ ಗ್ರಾಮದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಸಮಾಜದಲ್ಲಿ ಒಬ್ಬರಿಗೊಬ್ಬರು ಪ್ರೀತಿಸಿ ನಡೆದಾಗ ಮಾತ್ರ ಸುಧಾರಣೆ ಆಗುತ್ತದೆ ನಡುವೆ ಆಗು ಹೋಗುಗಳೆ ಜೀವನ ಪರಸ್ಪರ ಹೊಂದಾಣಿಕೊಂಡು ನಡೆದಾಗ ಗ್ರಾಮಗಳು ಸುಧಾರಣೆಯಾಗುತ್ತದೆ ಜಾತ್ಯಾತೀತವಾದ ದೇವಸ್ಥಾನ ಆಂಜನೇಯ ದೇವಸ್ಥಾನ ಯಾವುದೇ ಜಾತಿ ಧರ್ಮಕ್ಕೆ ಸೇರಿದವನಲ್ಲ ಆಂಜನೇಯನಿಗೆ ಎಲ್ಲ ಧರ್ಮದ ಭಕ್ತರು ಇದಕ್ಕೆ ನಡೆದುಕೊಳ್ಳುತ್ತಾರೆ ಇಂದಿನ ಪೀಳಿಗೆಯಲ್ಲಿ ತಾಯಂದಿರು ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದು ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಕುರಿತು ತಿಳಿಸುವ ಅವಶ್ಯಕತೆ ಇದೆ ಎಂದರು.  

ರಾಜ್ಯ ಗ್ಯಾರಂಟಿ ಉಪಾಧ್ಯಕ್ಷ ಎಸ್ ಆರ್ ಪಾಟೀಲ್ ಮಾತನಾಡಿ "ಭಾರತದ ಸೈನಿಕರು ಪಾಕಿಸ್ತಾನದೊಂದಿಗೆ ಹೋರಾಡುತ್ತಿದ್ದು, ಪ್ರತಿಯೊಬ್ಬ ಪ್ರಜೆಯೂ ಅವರೊಂದಿಗೆ ಇದ್ದೇವೆ. ಆಂಜನೇಯ ಸ್ವಾಮಿ ದೇಶಕ್ಕೆ ಕೀರ್ತಿ ತರುವ ಶಕ್ತಿಯನ್ನು ನಮ್ಮ ಸೈನಿಕರಿಗೆ ನೀಡಲಿ" ಎಂದು ಹಾರೈಸಿದರು. ಈ ವೇಳೆ ಕೆ ಎಮ್ ಎಫ್ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟ. ನಾಗರಾಜ ಆನ್ವೇರಿ. ಚನ್ನಬಸಪ್ಪ ಹುಲ್ಲತ್ತಿ.ದೇವಸ್ಥಾನದ ಸಮಿತಿಯ ಅಧ್ಯಕ್ಷ ಹನುಮಂತಪ್ಪ ಗಬಗಡಿ ಉಪಾಧ್ಯಕ್ಷ ನಾಗರಾಜ್ ಹಾದಿಮನಿ ಗ್ರಾಮ ಪಂಚಾಯತಿ ಅಧ್ಯಕ್ಷ ರೇಣುಕಮ್ಮ ತಗಡಿನಮನಿ ಉಪಾಧ್ಯಕ್ಷ ನೀಲಗಿರಿಯಪ್ಪ ಕಾಕೋಳ. ಸದಸ್ಯರಾದ ಶೇಖಪ್ಪ  ಅಳಲಗೆರಿ. ಯಶೋಧ ಕಮತರ. ಗ್ರಾಮದ ಎಲ್ಲ ಹಿರಿಯರು ನಾಗರಿಕರು ಉಪಸ್ಥಿತರಿದ್ದರು.