ಹುಬ್ಬಳ್ಳಿ 11: ವಿಜಯಪರದ 9 ತಿಂಗಳ ಬಾಲೆ 422 ವಸ್ತುಗಳನ್ನು ಗುರುತಿಸುವ ಮೂಲಕ ನೊಬೆಲ್ ವಿಶ್ವದಾಖಲೆ ನಿರ್ಮಿಸಿರುವ ಐರಾ ದೀಪಕ ಕತ್ತಿ ಅವರನ್ನು ಬಸವಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಹೊರಕೇರಿ ಹೃದಯ ತುಂಬಿ ಅಭಿನಂದನೆಗಳನ್ನು ಸಲ್ಲಿಸಿದರು. 9 ತಿಂಗಳ ಮಗು ಐರಾ ಅವರಿಗೆ ಮುಂದಿನ ಜೀವನ ಉತ್ತಮ ಹಾಗೂ ಸಮೃದ್ಧಿಯಿಂದ ಕೂಡಿರಲಿ, ಹೀಗೆ ಸಾಧನೆ ಮುಂದುವರೆಯಲಿ, ಯಶಸ್ಸು ಸದಾ ಸಿಗಲಿ ಎಂದು ಶುಭ ಕೋರಿದರು.
ಹುಬ್ಬಳ್ಳಿಯ ಉದ್ಯಮಿ, ಐರಾ ಅಜ್ಜ ಲೋಕೇಶ ಕೊರವಿ, ಅಜ್ಜಿ ಪ್ರೇಮಾ ಕೊರವಿ, ತಾಯಿ ಅನುಷಾ ದೀಪಕ ಕತ್ತಿ, ಮಾವ- ರೈಫಲ್ ತಯಾರಿಕ ಫಾಕ್ಟರಿ ಮಾಲಿಕ, ಇಂಜಿನಿಯರ್ ಅಂಕುಶ ಕೊರವಿ, ಶ್ರೀ ಸಿದ್ಧಾರೂಢಮಠ ಟ್ರಸ್ಟ ಕಮೀಟಿಯ ಕಾರ್ಯಾಧ್ಯಕ್ಷರು, ಖ್ಯಾತ ಲೆಕ್ಕಪರಿಶೋಧಕರಾದ ಸಿಎ ಚೆನ್ನವೀರ ಮುಂಗರವಾಡಿ, ಅಂಬಿಗರ ಚೌಡಯ್ಯ ಸಮಾಜದ ಮುಖಂಡ ಅಶೋಕಕುಮಾರ ಬೆಸ್ತ, ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಕಾರ್ಯದರ್ಶಿ ಡಾ. ಪ್ರಕಾಶ ಮುನ್ನೋಳಿ, ಕಾರ್ಯಾಧ್ಯಕ್ಷ ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಬಸವ ಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿಯ ಶಾಲೆಯ ಅಧ್ಯಕ್ಷ ಎಸ್.ವಿ.ಕೊಟಗಿ, ಬಸವರಾಜ ಲಿಂಗಶೆಟ್ಟರ, ಕೆ.ಎಸ್.ಇನಾಮತಿ, ಎಂ.ಬಿ.ಕಟ್ಟಿ, ಪ್ರಭು ಅಂಗಡಿ, ಶಿವಾನಂದ ಬೆನ್ನಾಳೆ, ಮುಂತಾದವರು ಉಪಸ್ಥಿತರಿದ್ದರು.