ಹೂವಿನ ಹಡಗಲಿ

ಹೊಳಗುಂದಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಹೊಳಗುಂದಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಹೂವಿನಹಡಗಲಿ 18: ತಾಲ್ಲೂಕಿನ ಹೊಳಗುಂದಿ-ಬಾವಿಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.ವಿಶ್ವಕರ್ಮ ಜನಾಂಗದ ಆರಾಧ್ಯ ದೇವರಾದ ಶ್ರೀ ಕಾಳಿಕಾಂಬ ಹಾಗೂ ವಿರಾಟ್ ವಿಶ್ವಕರ್ಮ ಸ್ವಾಮಿಯ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು.ಎರಡು ಗ್ರಾಮದ ಮುಖ್ಯ ಬೀದಿಯಲ್ಲಿ ಅದ್ದೂರಿಯಾಗಿ ನಡೆಯಿತು. 

ಶಿಲ್ಪಕಲೆ ಅಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕ್ರತರಾದ ಹಂಸನಾಂದ ಆಚಾರ್ಯ, ಶಂಕರ ಆಚಾರ್ಯ ಅವರು ಮಾತನಾಡಿ ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಸರ್ಕಾರ ಮಟ್ಟದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ ಎಂದು ಅಭಿನಂದಿಸಿದರು. ಕಾರ‍್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕರಿಯಪ್ಪ, ಕಾರ‍್ಯದರ್ಶಿ ವಿ.ಜಿ.ಬಡಿಗೇರ ಆಚಾರ್ಯ,ರಥ ಶಿಲ್ಪಿ ಮೌನೇಶ ಆಚಾರ್ಯ, ಗ್ರಾ.ಪಂ.ಅಧ್ಯಕ್ಷೆ ಎಸ್.ಸಿದ್ದಮ್ಮ, ಉಪಾಧ್ಯಕ್ಷ ಎ.ರಮೇಶ, ಸದಸ್ಯರಾದ ಹಾವನೂರು ವೀರಮ್ಮ ಅಜ್ಜಪ್ಪ, ಸ್ವರೂಪಾನಂದ, ರುದ್ರಗೌಡ ಸೇರಿದಂತೆ ಹೊಳಗುಂದಿ ಹಾಗೂ ಸುತ್ತಮುತ್ತಲಿನ ಗ್ರಾಮದ ವಿಶ್ವಕರ್ಮ ಬಂಧುಗಳು ಪಾಲ್ಗೊಂಡಿದ್ದರು.

ಸುದ್ದಿ ಓದಿ