ಲೋಕದರ್ಶನ ವರದಿ
ವಿಜಯಪುರ 11: ಸಿಂದಗಿ ತಾಲೂಕಿನ ತೋಟದ ವಸ್ತಿಯಲ್ಲಿ ಪತ್ತೆಯಾಗಿದ್ದ ಅನಾಮಧೇಯ ಗಂಡು ಮಗುವನ್ನು ರಕ್ಷಿಸಿ ಮಕ್ಕಳ ಸಹಾಯವಾಣಿ ತಂಡ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದೆ.
ಕಳೆದ ದಿ.7 ರಂದು ಸಾಯಂಕಾಲ ಈ ಮಗು ತೋಟದವಸ್ತಿಯಲ್ಲಿ ಪತ್ತೆಯಾಗಿತ್ತು, ಈ ಮಗುವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಮ್ಮ ಮನೆಯಲ್ಲಿ ತಂದು ಸಾಕಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಮಕ್ಕಳ ಸಹಾಯವಾಣಿ ತಂಡಕ್ಕೆ ಮಂಗಳವಾರ ಸಾಯಂಕಾಲ ದೂರವಾಣಿ ಮೂಲಕ ಮಾಹಿತಿ ಬಂದಿತ್ತು. ತಕ್ಷಣವೇ ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದಾ ತೋಳಬಂದಿ ನೇತೃತ್ವದ ಮೂರು ಜನರ ತಂಡ ಸಿಂದಗಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಗು ಇದ್ದ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಮಗು ಆರೋಗ್ಯವಾಗಿದೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿ ತಂಡದ ಸದಸ್ಯರಾದ ಶಶಿಕಲಾ ಜಾಬೇನವರ, ಸುವಣರ್ಾ ವಾಲಿಕಾರ, ಪೊಲೀಸ್ ಸಿಬ್ಬಂದಿ ಆರ್.ಬಿ. ಕಗ್ಗೋಡ ಅವರು ಭಾಗವಹಿಸಿದ್ದರು.