ವಿಜಯಪುರ: ಮಮದಾಪುರ ಕೆರೆಗೆ ಸಿದ್ಧೇಶ್ವರ ಶ್ರೀಗಳ ಭೇಟಿ
ಲೋಕದರ್ಶನ ವರದಿ
ವಿಜಯಪುರ 27: ನಡೆದಾಡುವ ದೇವರೆಂದೇ ಕರೆಯಲ್ಪಡುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಯವರು ಐತಿಹಾಸಿಕ ಮಮದಾಪುರ ಕೆರೆಗೆ ಇಂದು ಭೇಟಿ ನೀಡಿ, ತುಂಬಿದ ಕೆರೆಯನ್ನು ವೀಕ್ಷಿಸಿದರು.
ಆದಿಲ್ಶಾಹಿ ಕಾಲದಲ್ಲಿ ನಿರ್ಮಾಣಗೊಂಡ ಈ ಕೆರೆ ನೀರಿಲ್ಲದೆ ಒಣಗಿ ನಿಂತಿದ್ದಾಗ, ಸ್ವಯಂ ಪ್ರೇರಿತರಾಗಿ ಈ ಕೆರೆಗೆ ಕಾಯಕಲ್ಪ ನೀಡಿ, ಕೆರೆಯ ಹೂಳು ತೆಗೆದು ಅದನ್ನು ಒಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ತುಂಬಿಸಿದ ಎಂ.ಬಿ.ಪಾಟೀಲ್ರನ್ನು ಈ ಭಾಗದ ಜನ ಶಾಶ್ವತವಾಗಿ ನೆನೆಯುತ್ತಾರೆ ಎಂದು ಮಮದಾಪುರ ವಿರಕ್ತಮಠದ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು ಕೆರೆಯ ಇತಿಹಾಸವನ್ನು ಶ್ರೀಗಳಿಗೆ ವಿವರಿಸಿದರು.
ಒಂದು ಸಾವಿರ ಎಕರೆ ಪರಿಸರದಲ್ಲಿ 2ಕೆರೆಗಳು ಸುತ್ತಲು ಅರಣ್ಯ ಪ್ರದೇಶವಿದ್ದು, ಹೂಳು ತೆಗೆದು ತುಂಬಿಸಿದ್ದರಿಂದ 30ಅಡಿ ಆಳದವರೆಗೂ ಈಗ ನೀರು ನಿಂತಿದೆ. ದೊಡ್ಡ ಕೆರೆಯಿಂದ 6-8ಹಳ್ಳಿಗಳಿಗೆ, ಸಣ್ಣ ಕೆರೆಯಿಂದ 10-12ಹಳ್ಳಿಗಳ ಭೂಮಿಗೆ ಅಂತರ್ಜಲಮಟ್ಟ ಹೆಚ್ಚಳವಾಗಿ ಅನುಕೂಲವಾಗಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಕಾತ್ರಾಳ ಬಾಲಗಾಂವದ ಅಮೃತಾನಂದ ಸ್ವಾಮಿಜಿ, ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಡಾ.ಮಹಾಂತೇಶ ಬಿರಾದಾರ, ಅಪ್ಪುಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 