ಹೂವಿನ ಹಡಗಲಿ

ಖೋ-ಖೋ ಸ್ಪರ್ಧೆಯಲ್ಲಿ ವಿದ್ಯಾಂಜಲಿ ಶಾಲೆಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆ

ಖೋ-ಖೋ ಸ್ಪರ್ಧೆಯಲ್ಲಿ ವಿದ್ಯಾಂಜಲಿ ಶಾಲೆಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆ

ಹೂವಿನಹಡಗಲಿ, ಸೆ.10: 2026-27ನೇ ಸಾಲಿನ ಪ್ರಾಥಮಿಕ ಶಾಲೆಗಳ ಹಿರೇಮಲ್ಲನಕೆರೆ ಕ್ಲಸ್ಟರ್ ಹಂತದ ಖೋ-ಖೋ ಸ್ಪರ್ಧೆಯಲ್ಲಿ ಹೊಳಗುಂದಿ ಗ್ರಾಮದ ಶ್ರೀಮತಿ ಕೌಲೂರು ತಾಯಮ್ಮ ವಿದ್ಯಾಂಜಲಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ ಹಾಗೂ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿವೆ.  ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕ್ಲಸ್ಟರ್ ಹಂತದ ಖೋ-ಖೋ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು.  ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ, ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ, ತಾಲ್ಲೂಕು ದೈಹಿಕ ಪರೀವೀಕ್ಷಕ ರಫಿ ಅಹಮದ್ ಖವಾಸ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 


ಸುದ್ದಿ ಓದಿ