ದಾಂಪತ್ಯಕ್ಕೆ ಕಾಲಿಟ್ಟ ಎರಡು ಜೋಡಿ,ವಟುಗಳಿಗೆ ದೀಕ್ಷೆ
ಲೋಕದರ್ಶನ ವರದಿ
ಹೂವಿನ ಹಡಗಲಿ : ಗವಿಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎರಡು ಜೋಡಿಗಳು ಹಸೆಮಣೆ ಏರಿದರು. ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಆರ್ಥಿಕ ಹೊರೆ ತಪ್ಪುತ್ತದೆ.ಜಾತ್ರೆ ಅಂಗವಾಗಿ ಪ್ರತಿ ವರ್ಷವೂ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಾ ಬರಲಾಗಿದ್ದು,ಸ್ವಾಮಿಯ ಸನ್ನಿಧಿಯಲ್ಲಿ ಸತಿಪತಿಗಳಾದವರು ಆದರ್ಶ ಜೀವನ ಸಾಗಿಸಿ ಎಂದು ಆಶೀರ್ವದಿಸಿದರು.
ವಿವಾಹ ಕಾರ್ಯಗಳಿಗೆ ಭಕ್ತಿ ಸೇವೆ ಸಲ್ಲಿಸಿದ ಬಿಜೆಪಿ ಯುವ ಮುಖಂಡರಾದ ಪಿ.ವಿಜಯಕುಮಾರ,ಭಾಗ್ಯ ವಿಜಯಕುಮಾರ ಅವರನ್ನು ಶ್ರೀಗಳು ಸನ್ಮಾನಿಸಿದರು. ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಿದರು.
ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಪೂಣರ್ಾನಂದ ಭಾರತಿ ಸ್ವಾಮೀಜಿ,ಇಟ್ಟಿಗಿ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ,ನಾಗತಿ ಬಸಾಪುರದ ಗಿರಿರಾಜ್ ಹಾಲಸ್ವಾಮಿಗಳು,ಉತ್ತಂಗಿ ಸೋಮಶಂಕರ ಸ್ವಾಮೀಜಿ,ಗಿರಿರಾಜ ಹಾಲಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಅಂಗೂರು ಶ್ರೀಗಳು,ಸಾಹಿತಿ ತೋ.ಮ.ಶಂಕ್ರಯ್ಯ ಸೇರಿದಂತೆ ಹರ-ಗುರು ಚರಮೂರ್ತಿಗಳು ಭಾಗವಹಿಸಿದ್ದರು. ಬೆಳಿಗ್ಗೆ ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಿದರು.