ನ.10 ರಂದು ಚಿದಂಬರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು
Various programs on the occasion of Chidambaram Jayanti on November 10
ನ.10 ರಂದು ಚಿದಂಬರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು
ಅಥಣಿ 09: ಚಿದಂಬರ ಮಹಾ ಸ್ವಾಮಿಗಳ 267 ನೇ ಅವತಾರ ಜಯಂತಿ ಮಹೋತ್ಸವ ಚಿದಂಬರ ಸೇವಾ ಸಮಿತಿ ಆಶ್ರಯದಲ್ಲಿ ನವ್ಹೆಂಬರ 10 ಸೋಮವಾರದಂದು ಅಥಣಿಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದೆ. ಮುಂಜಾನೆ 5.30ಕ್ಕೆ ಕಾಕಡಾರತಿ, 5.45 ರಿಂದ 6.45 ರವರೆಗೆ ಚಿದಂಬರೇಶ್ವರ ನಾಮ ಸ್ನರಣೆ, 7 ರಿಂದ 10.30 ರವರೆಗೆ ರುದ್ರಾಭಿಷೇಕ, 10.45 ರಿಂದ 11.45 ರವರೆಗೆ ವಾದಿರಾಜ ಜಂಬಗಿ ಇವರಿಂದ ಕೀರ್ತನೆ, 12 ಗಂಟೆಗೆ ಜನ್ಮೋತ್ಸವ ಸಮಾರಂಭ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ನೆರವೇರುವುದು. ಸಂಜೆ 7 ಗಂಟೆಗೆ ರಾಮದೇವರ ಹಾಗೂ ಶಿವ ಚಿದಂಬರ ಮಹಾಸ್ವಾಮಿಗಳವರ ಕಾರ್ತಿಕೋತ್ಸವ, ಭಜನೆ, ಸಂಗೀತ ಸೇವೆ, ಮಂತ್ರ ಪುಷ್ಪ, ಮಹಾ ಮಂಗಳಾರತಿಯೊಂದಿಗೆ ಜಯಂತೋತ್ಸವ ಮುಕ್ತಾಯಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಸೇವಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 