ತಂಬಾಕು ಸೇವನೆ ಸಮಾಜ ನಾಶಮಾಡುವ ಪಿಡುಗು : ಮ್ಯಾಗೇರಿ

ತಂಬಾಕು ಸೇವನೆ ಸಮಾಜ ನಾಶಮಾಡುವ ಪಿಡುಗು : ಮ್ಯಾಗೇರಿ Tobacco use is a scourge destroying society: Mageri

ಶಿಗ್ಗಾವಿ 03  : ತಂಬಾಕು ಸೇವನೆ ಆರೋಗ್ಯವಂತ ಸಮಾಜ ನಾಶಮಾಡುವ ಪಿಡುಗು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಿವಾನಂದ ಮ್ಯಾಗೇರಿ ಹೇಳಿದರು.  ಪಟ್ಟಣದ ಗಾಂಧಿನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಏರಿ​‍್ಡಸಿದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಂಬಾಕು ಗುಟ್ಕಾ ಬೀಡಿ ಸಿಗರೇಟ್ ನಂತ ಮಾದಕ ವಸ್ತುಗಳಿಗೆ ಇಂದಿನ ಮಕ್ಕಳು ವಿದ್ಯಾರ್ಥಿಗಳು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ವಿಷಾಧನೆಯ ಸಂಗತಿ ತಂಬಾಕು ಸೇವನೆಯಿಂದ ಭಾರತ ದೇಶದಲ್ಲಿ ಲಕ್ಷಾಂತರ ಜನರು ಬಲಿಯಾಗುತ್ತಿದ್ದಾರೆ ಇದನ್ನು ಕಂಡು ಸ್ವಾಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂಬ ನಿರ್ಧಾರ ಮತ್ತು ಸಂಕಲ್ಪವನ್ನು ಮಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪ್ರತಿಯೊಂದು ಹಳ್ಳಿ ಕೇರಿಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. 

ಯೋಜನಾಧಿಕಾರಿ ಶೇಖರ ನಾಯ್ಕ ಮಾತನಾಡಿ ಸ್ವ ಸಹಾಯ ಸಂಘಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು. ನಿಮ್ಮ ನಿಮ್ಮ ಮನೆಗಳಲ್ಲಿ ಹಾಗೂ ನಿಮ್ಮ ಸಮಾಜದ ಸುತ್ತ ಮುತ್ತ ಪರಿಸರದಲ್ಲಿ ತಂಬಾಕು ಮುಕ್ತ ಜೀವನ ನಡೆಸಬೇಕು ಎಂದರು.  ಆರೋಗ್ಯ ಇಲಾಖೆ ಮೇಲ್ವಿಚಾರಕ ನಾಗನಗೌಡ ಪಾಟೀಲ್ ಮಾತನಾಡಿ ತಂಬಾಕು ಇದು ಅಪಾಯಕಾರಿ ಅಂತ ಗೊತ್ತಿದ್ದರೂ ಕೂಡ ಅದನ್ನು ನಾವು ಸೇವನೆ ಮಾಡುತ್ತೇವೆ. ತಂಬಾಕು ಇದರಲ್ಲಿ ನಿಕೋಟಿನ್ ಎಂಬ 10 ರೀತಿಯ ವಿಷವನ್ನು ಸೇರಿಸಿ ತಯಾರಿಸುವುದೇ ತಂಬಾಕು. ಸಿಗರೇಟ್, ಬೀಡಿ ಇಂತವು ಹೊಗೆಯನ್ನು ತಗಳುವದರಿಂದ ಮನುಷ್ಯನ ದೇಹಕ್ಕೆ ಪರಿಣಾಮ ಬಿಳತ್ತೆ, ಇವಾಗ ಆಸ್ಪತ್ರೆಗಳಿಗೆ ಎಷ್ಟೋ ಜನ ರೋಗಿಗಳು ಬಂದ್ರೆ ಅದರಲ್ಲಿ 60ಅ ರೋಗಿಗಳು ಧೂಷ್ಟಗಳಿಂದ ಬಲಿಯಾದವರು. ನೀವು ಧೂಷ್ಟಗಳಿಂದ ದೂರವಿದ್ದು ಒಳ್ಳೆಯ ಆರೋಗ್ಯ ಕಾಪಾಡಿಕೊಂಡು ಹೋಗಿ ಎಂದು ಕಿವಿ ಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಶೇಖರ್ ನಾಯ್ಕ, ನಾಗನಗೌಡ ಎಸ್ ಪಾಟೀಲ್, ಒಕ್ಕೂಟದ ಅಧ್ಯಕ್ಷೆ ಯಲ್ಲಮ್ಮ ಎಸ್ ಮಡಿವಾಳರ, ಮೇಲ್ವಿಚಾರಕ ರಾಘವೇಂದ್ರ ಪೂಜಾರಿ ಸೇವಾಪ್ರತಿನಿಧಿ ಗೀತಾ, ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.