ಸವದತ್ತಿ ಪೋಲೀಸರಿಂದ ಕಳ್ಳನ ಬಂಧನ
Thief arrested by Savadatti police
ಸವದತ್ತಿ 25: ಪೊಲೀಸ್ ಠಾಣೆ ವ್ಯಾಪ್ತಿಯ ನವೆಂಬರ್ 21 ರಂದು ಸುಜಾತಾ ರಾಜೇಂದ್ರ ಸೋನಾರ, ಜಮಖಂಡಿ ತಾಲ್ಲೂಕಿನ ವರ್ತಕ ಗಲ್ಲಿ ಇವರು ಕುಟುಂಬ ಸಮೇತ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಯಲ್ಲಮ್ಮನಗುಡ್ಡಕ್ಕೆ ಬಂದು ದರ್ಶನವನ್ನು ಮಾಡಿಕೊಂಡು ಹೋಗುವಾಗ ಅವರು ಕಾರಿನಲ್ಲಿ ಕುಳಿತುಕೊಂಡಿದ್ದಾಗ ಯಾರೋ ಒಬ್ಬ ಆರೋಪಿತನು ತನ್ನ ಸ್ಕೂಟಿ ಮೋಟಾರ ಸೈಕಲನಲ್ಲಿ ಬಂದು ದೂರುದಾರಳ ಕಾರಿನ ಕಿಟಕಿಯ ಒಳಗೆ ಕೈ ಹಾಕಿ ದೂರದಾರಳ, ಕೊರಳಲ್ಲಿದ್ದ ಎರಡು ಬಂಗಾರದ ಮಂಗಳಸೂತ್ರಗಳನ್ನು ಕೈಯಿಂದ ಕಿತ್ತುಕೊಂಡು ಕಳ್ಳತನ ಮಾಡಿದ್ದು ಆರೋಪದ ಮೇಲೆ ಒಬ್ಬ ಪ್ರತ್ಯೇಕ ಆರೋಪಿಯನ್ನು ಸವದತ್ತಿ ಪೊಲೀಸರು ಮಂಗಳವಾರ 24 ರಂದು ಬಂದಿಸಿದ್ದಾರೆ.
ತಾಲ್ಲೂಕಿನ ನಿಪ್ಪಾಣಿ ಸಾ.ಬೆಡಕಿಹಾಳ ಮೂಲದ ಆರೋಪಿತನಾದ ವಿನೋದ ಅಶೋಕ ಯಾದವ, ಎಂದು ಗುರುತಿಸಿಲಾಗಿದ್ದು ಆರೋಪಿಯಿಂದ ಯಥಾವತ್ತಾಗಿ ಜಪ್ತ ಮಾಡಿ ಮೋಟಾರ್ ಸೈಕಲ್ ಹಾಗೂ 34 ಗ್ರಾಂ ಬಂಗಾರದ ಮಾಂಗಲ್ಯ ಸರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ ಅವರ ಮಾರ್ಗದರ್ಶನದಲ್ಲಿ ಪಿಐ ಸುರೇಶ್ ಬೆಂಡೆಗುಂಬಳ ನೇತೃತ್ವದಲ್ಲಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಗೌಡಿ, ಪೊಲೀಸ್ ಸಿಬ್ಬಂದಿ ಎಎಸ್‌ಐ ಬಿ.ಆರ್. ಸಣ್ಣಮಾಳಗಿ, ಯಲ್ಲಪ್ಪ ಅಜ್ಜನ್ನವರ, ಸುಭಾಸ ಬೆಟಗೇರಿ, ಉದ್ದಪ್ಪ ಪೂಜೇರ, ಅಮರ ಸಾರಾಪೂರ, ಶಹಜಾನ ತೊರಗಲ್, ಬಸವರಾಜ ತಂಗೋಜಿ, ಶಿವಾನಂದ ಕೊರಕೊಪ್ಪ ಸೇರಿ ಯಶಸ್ವಿ ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 