ಪಡಿತರ ಸಮಸ್ಯೆ : ದೂರು ನೀಡಲು ಸಹಾಯವಾಣಿ
ಮಂಗಳೂರು, ಏಪ್ರಿಲ್ 18, ಜಿಲ್ಲೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ (ಮಧ್ಯಾಹ್ನ ಊಟದ ವಿರಾಮ 1.30 ಗಂಟೆಯಿಂದ 2.30 ಗಂಟೆವರೆಗೆ ಹೊರತುಪಡಿಸಿ) ಪಡಿತರ ಪಡೆಯಬಹುದಾಗಿದೆ.ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ತೂಕದಲ್ಲಿ ಕಡಿಮೆ ಕೊಟ್ಟಲ್ಲಿ, ಹಣ ಕೇಳಿದಲ್ಲಿ ಪಡಿತರ ಜೊತೆಗೆ ವಸ್ತುಗಳನ್ನು ಕಡ್ಡಾಯವಾಗಿ ಕೊಳ್ಳುವಂತೆ ಒತ್ತಾಯಿಸಿದಲ್ಲಿ, ಪಡಿತರ ವಿತರಣೆ ನಿರಾಕರಿಸಿದಲ್ಲಿ, ಪಡಿತರ ಚೀಟಿಯ ಬಗ್ಗೆ ಹಾಗೂ ವಿತರಣೆ ಬಗ್ಗೆ ಏನಾದರೂ ಸಮಸ್ಯೆ ಇದ್ದಲ್ಲಿ ಮತ್ತು ಪಡಿತರ ಲಭ್ಯತೆ ಹಾಗೂ ಗುಣಮಟ್ಟದಲ್ಲಿ ಏನಾದರೂ ಕೊರತೆಯಿದ್ದಲ್ಲಿ ಈ ಕೆಳಗಿನ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಹೆಸರು ಹಾಗೂ ಅಧಿಕಾರಿಗಳ ವಿವರ ಇಂತಿವೆ :
ಮಂಗಳೂರು ನಗರ - ಸಹಾಯಕ ನಿರ್ದೇಶಕರು , ಕಸ್ತೂರಿ ಆಹಾರ ನಿರೀಕ್ಷಕರು, ರಫೀಕ್ ಎಂ, ದೂರವಾಣಿ ಸಂಖ್ಯೆ :0824-2423622,
ಮಂಗಳೂರು ಗ್ರಾಮಾಂತರ – ಆಹಾರ ಶಿರಸ್ತೇದಾರರು ಮೋಹಿನಿ ಕುಮಾರಿ, ಆಹಾರ ನಿರೀಕ್ಷಕರು ರಾಜಶ್ರೀ, ದೂರವಾಣಿ ಸಂಖ್ಯೆ : 0824-2412033,
ಬಂಟ್ವಾಳ ತಾಲೂಕು–ಆಹಾರ ಶಿರಸ್ತೇದಾರರು ಶ್ರೀನಿವಾಸ್ ದೂರವಾಣಿ ಸಂಖ್ಯೆ: 08255-232125,
ಬೆಳ್ತಂಗಡಿ ತಾಲೂಕು – ಆಹಾರ ನಿರೀಕ್ಷಕರು, ವಿಶ್ವ .ಕೆ, ದೂರವಾಣಿ ಸಂಖ್ಯೆ : 08256-232383,
ಪುತ್ತೂರು ತಾಲೂಕು–ಆಹಾರ ನಿರೀಕ್ಷಕರು, ಸರಸ್ವತಿ ಕೆ. ದೂರವಾಣಿ ಸಂಖ್ಯೆ : 08251-231349,
ಸುಳ್ಯ ತಾಲೂಕು – ಆಹಾರ ಶಿರಸ್ತೇದಾರರು ಕಮಲ, ಆಹಾರ ನಿರೀಕ್ಷಕರರು, ವಸಂತಿ ದೂರವಾಣಿ ಸಂಖ್ಯೆ : 08257-231330 ಇವರನ್ನು ಸಂಪರ್ಕಿಸಿ ಪರಿಹಾರಕಂಡುಕೊಳ್ಳಬಹುದು ಎಂದು ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 