ಕೊರೊನಾ ಬಂದ ತಾಲೂಕಿನಲ್ಲೇ ರಥೋತ್ಸವ ಎಳೆದ ಜನ
ಕಲಬುರಗಿ, ಏ.16,ಕೊರೊನಾ ಕಾಣಿಸಿಕೊಂಡ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಗ್ರಾಮಸ್ಥರು ರಥೋತ್ಸವ ಎಳೆದಿದ್ದಾರೆ. ಚಿತ್ತಾಪುರ ತಾಲೂಕಿನ ರಾವೂರು ಗ್ರಾಮ ಗ್ರಾಮದಲ್ಲಿ ಗುರುವಾರ ನಸುಕಿನ ವೇಳೆ ಕೆಲವರು ಸಿದ್ಧಲಿಂಗೇಶ್ವರ ರಥೋತ್ಸವವನ್ನು ಎಳೆದಿದ್ದಾರೆ.ರಥೋತ್ಸವದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಸೀಲ್ ಡೌನ್ ಮಾಡಿರುವ ಪ್ರದೇಶದಿಂದ ಮೂರು ಕಿಲೋ ಮೀಟರ್ ದಲ್ಲಿರುವ ರಾವೂರು ಗ್ರಾಮದಲ್ಲಿ ರಥೋತ್ಸವ ಎಳೆಯಲಾಗಿದೆ.ಇತ್ತೀಚೆಗೆ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ತಮ್ಮೂರಿನ ಪಕ್ಕದಲ್ಲಿ ಕೊರೊನಾ ಬಂದಿದ್ದರು ಜನ ಎಚ್ಚೆತ್ತುಕೊಳ್ಳದ ಬೇಜವಾಬ್ದಾರಿ ವರ್ತಿಸಿದ್ದಾರೆ.ಈ ಹಿಂದೆ ಗ್ರಾಮಸ್ಥರು ರಥೋತ್ಸವ ಮಾಡುವುದಿಲ್ಲಾ ಎಂದು ಗ್ರಾಮಸ್ಥರು ಹೇಳಿದ್ದರು.
ಆದರೆ, ಇಂದು ನಸುಕಿನ ಜಾವದಲ್ಲಿ ದಿಢೀರನೆ ರಥೋತ್ಸವ ಕಾರ್ಯ ಮಾಡಿ ಮುಗಿಸಿದ್ದಾರೆ.ಜಿಲ್ಲೆಯಲ್ಲಿ ಇದೂವರೆಗೂ ಮೂವರು ಜನ ಕೊರೊನಾ ಗೆ ಬಲಿಯಾಗಿದ್ದು, ಹದಿನೆಂಟು ಜನರಲ್ಲಿ ಸೋಂಕು ದೃಢವಾಗಿದೆ. ಅಲ್ಲದೇ, ಜಿಲ್ಲೆಯನ್ನು ರೆಡ್ ಜೋನ್ ಎಂದು ಘೋಷಿಸಲಾಗಿದೆ. ಆದರೂ, ನೂರಾರು ಜನ ಸೇರಿ ರಥೋತ್ಸವ ನೆರವೇರಿಸುವ ಮೂಲಕ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿದ್ದಾರೆ.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 