ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ್ : ಗೊರವಯ್ಯ ನೀಲಪ್ಪ
The pearl was produced, the baby was breastfed and the strength was there: Goravayya Nilappa
ಲೋಕದರ್ಶನ ವರದಿ
ಶಿಗ್ಗಾವಿ 27: ಮುತ್ತು ಉತ್ಪತ್ತಿ ಆಯಿತು ಶಿಶುವಿಗೆ ಹಾಲೇರಿಯಿತಲೇ ಪರಾಕ ಇದು ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ್ ಜಾತ್ರೆಯಲ್ಲಿ ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ ನುಡಿದ ಕಾರ್ಣಿಕ ನುಡಿ. ಇದರ ಅರ್ಥ ಈ ವರ್ಷ ಮಳೆ ಬೆಳೆ ಚನ್ನಾಗಿ ಆಗಿ ಎಲ್ಲರಿಗೂ ಒಳ್ಳೆಯದಾಗುವದು ಎಂಬುದು ಕಾರ್ಣಿಕದ ತಾತ್ಪರ್ಯ ಎಂದು ನೆರೆದ ಭಕ್ತ ಸಮೂಹ ವಿಮರ್ಶೆ ಮಾಡಿದರು. ನಂತರ ಮೈಲಾರಲಿಂಗೇಶ್ವರ ದೇವಸ್ಥಾನದ ಎದುರಿಗೆ ಗ್ರಾಮದ ಗೊರವಯ್ಯರಾದ ಮಾಲತೇಶ ಓಲೇಕಾರ, ಮಂಜುನಾಥ ಭೀಮನವರ, ದೇವೇಂದ್ರ್ಪ ಕಾಳಿ, ಅಣ್ಣಯ್ಯ ಪೂಜಾರ,ಶಿವುಕುಮಾರ ಸುಣಗಾರ, ನಿಂಗಪ್ಪ ಕಾಳಿ ಅವರು ಕಬ್ಬಿಣದ ಸರಪಳಿಗಳನ್ನು ಹರೆಯುದರ ಮೂಲಕ ಸರಪಳಿ ಪವಾಡ ನಡೆಸಿದರು. ನಂತರ ಮಹಾಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಧರ್ಮಣ್ಣ ಕಿವುಡನವರ, ಶಿವಪ್ಪ ಸಂಜೀವಣ್ಣವರ, ಹೇಮಂತ ಮೋದಿ, ಪ್ರತೀಕ ಮೋದಿ, ಶರೀಫ ಮಾಕಪ್ಪನವರ, ರುದ್ರಗೌಡ ಪಾಟೀಲ,ಮಲ್ಲಿಕಾರ್ಜುನ ಅಗಸರ, ರುದ್ರ್ಪ ಕಾಳಿ,ಮಂಜುನಾಥ ಪೂಜಾರ, ಮಾಲತೇಶ ಕುಲಕರ್ಣಿ, ಶಿವುಪುತ್ರಯ್ಯ ಪೂಜಾರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಭಕ್ತಾದಿಗಳು ಇದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 