ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು: ಡಾ. ಸಾರ್ವಭೌಮ ಬಗಲಿ
The medical profession is the most sacred: Dr. Sarvabhouma Bagali
ಲೋಕದರ್ಶನ ವರದಿ
ಇಂಡಿ 07 : ವೈದ್ಯಕೀಯ ವೃತ್ತಿಯು ಅತ್ಯಂತ ಪವಿತ್ರವಾದದ್ದು. ಆರೋಗ್ಯವಂತ ಸಮಾಜವನ್ನು ಕಟ್ಟಲು ಮತ್ತು ಅಮೂಲ್ಯವಾದ ಆರೋಗ್ಯ ಸಂಪತ್ತನ್ನು ಕಾಪಾಡುವಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಮಾಜಿ ಶಾಸಕರು ಹಾಗೂ ಖ್ಯಾತ ಚಿಕ್ಕಮಕ್ಕಳ ತಜ್ಞರಾದ ಡಾ.ಸಾರ್ವಭೌಮ ಎಸ್. ಬಗಲಿ ಯವರ ಹೇಳಿದರು. ಅವರು ಇಂಡಿ ನಗರದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಇಂಡಿ ತಾಲೂಕು ಆರೋಗ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋಸಹಜ ನಿವೃತ್ತಿಯಾದ ಡಾ ರಾಜಶೇಖರ ಕೊಳೆಕರ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಡಾ. ಸಾರ್ವಭೌಮ ಬಗಲಿ ಅವರು.ವೈದ್ಯ ವೃತ್ತಿ ಕೇವಲ ಒಂದು ಉದ್ಯೋಗವಲ್ಲ ಅದೊಂದು ಮಹಾನ್ ಸಮಾಜ ಸೇವೆಯಾಗಿದೆ ಪುರಾತನ ಕಾಲದಿಂದಲೂ ವೈದ್ಯರ ಸೇವೆ ದೇವರ ಸಮಾನ ಎಂದು ಕರೆಯಲಾಗಿದೆ.
ಅವರ ಶ್ರಮ ಮತ್ತು ನಿಸ್ವಾರ್ಥ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದು, ರೋಗಿಗಳ ನೋವನ್ನ ತಮ್ಮ ನೋವು ಎಂದು ಭಾವಿಸಿ ತಮ್ಮ ನಿದ್ದೆ, ಹಸಿವು, ಸುಖವನ್ನ ತ್ಯಾಗ ಮಾಡಿ ನಿರಂತರ ರೋಗಿಗಳ ಸೇವೆಯಲ್ಲಿ ಇರುತ್ತಾರೆ. ಸಂಕಷ್ಟದಲ್ಲಿರುವ ಜೀವಗಳನ್ನ ರಕ್ಷಣೆ ಮಾಡುವುದರ ಜೊತೆಗೆ ರೋಗಿಗಳ ಮತ್ತು ಅವರ ಕುಟುಂಬದಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ವೈದ್ಯರು ಮಾಡುತ್ತಾರೆ.ಡಾ ರಾಜಶೇಖರ ಕೊಳೆಕರ ಹಾಗೂ ನನ್ನ ಸಂಬಂಧ ಬಹಳ ಹಳೆಯದು.ನಾನು 2008 ರಲ್ಲಿ ಇಂಡಿ ಮತಕ್ಷೇತ್ರದ ಶಾಸಕರಾದ ಇಂಡಿ ನಗರದಲ್ಲಿ ಇರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಹಾಗೂ ಆಸ್ಪತ್ರೆಗೆ ಅನೇಕ ಸಮಸ್ಯೆ ಪರಿಹರಿಸಲು ನನ್ನ ಜೊತೆ ರಾಜಶೇಖರ ಕೊಳೆಕರ ಕೂಡಾ ಇದ್ದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಅವರು ಮಾತನಾಡಿ ರಾಜಶೇಖರ ಕೊಳೆಕರ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ನಮ್ಮೆಲ್ಲರಿಗೆ ಹೆಮ್ಮೆ ಪಡುವಂತದ್ದು, ಆಸ್ಪತ್ರೆಯ ಮೂಲಕ ಈ ಭಾಗದ ಜನರಿಗೆ ಉತ್ತಮ ಸೇವೆಗಳು ದೊರಕಿಸಿ ತಾಲ್ಲೂಕಿನಾದ್ಯಂತ ಉತ್ತಮ ಕೆಲಸ ಮಾಡುವ ಮೂಲಕ ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ವಿಜಯಪೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಕತಕುಮಾರ ಗುಣಾರಿ ಮಾತನಾಡಿ ವೈದ್ಯರಿಲ್ಲದ ಸಮಾಜವನ್ನು ನಾವು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅವರ ಸೇವೆ ಇಲ್ಲದೆ, ನಮ್ಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಜೀವನ ಸಾಧ್ಯವಿಲ್ಲ ವೈದ್ಯಕೀಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಮತ್ತು ಆರೋಗ್ಯ ಸೇವೆ ಜನ ಮೆಚ್ಚುಗೆ ಪಾತ್ರವಾಗಿರಬೇಕು. ಹಂತವರ ಹೆಸರು ಅಜಾಭರ ಎಂದು ಹೇಳಿದರು.ಈ ಸಂದರ್ಭದಲ್ಲಿ ಇಂಡಿ ನಗರ ಸಿಪಿಐ ಪ್ರದೀಪ್ ಭಿಸೆ ಹಾಗೂ ಸಿದ್ದ ಬ್ಯಾಂಕ್ ನಿರ್ದೇಶಕರಾದ ಜಗದೀಶ್ ಕ್ಷೇತ್ರಿ ಇಂಡಿ ತಾಲೂಕು ವೈದ್ಯಾಧಿಕಾರಿ ಡಾ. ಆರ್ ಎಸ್ ಇಂಗಳೆ ಹಾಗೂ ಡಾ. ಶಿವಾನಂದ ಮಪ್ಪಿಪೊಳಿ ಡಾ.ಸಿ ಎಂ ತಾಳಿಕೋಟೆ ಡಾ.ಅನೀಲ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಅಧಿಕಾರಿ ಧನರಾಜ್ ಮುಜಗೊಂಡ ನಿರೂಪಿಸಿದರು. ಅಖಿಲ ಭಾರತ ವಿದ್ಯಾರ್ಥಿಗಳ ಪರಿಷತ್ ಇಂಡಿ ನಗರ ಘಟಕ ಅಧ್ಯಕ್ಷರಾದ ಭೀಮನಗೌಡ ಬಗಲಿ ವಂದಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 