ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ : ಆದರೂ ಕಾಳಜಿ ಕೇಂದ್ರ ತೆರೆಯಲು ಸನ್ನದ್ಧರಾಗಿದ್ದೇವೆ : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
The Meteorological Department has said that the rain will decrease: However, we are ready to open a
ಕಾರವಾರ 19 : ಕಳೆದ 2-3 ದಿನಗಳಿಂದ ಸುರಿದ ಮಳೆಗೆ ಡ್ಯಾಂಗಳು ತುಂಬುವ ಹಂತದಲ್ಲಿದ್ದು ಲಿಂಗನಮಕ್ಕಿ ಯಿಂದ 15 ಸಾವಿರ ಕ್ಯೂಸೆಕ್ಸ,ಕದ್ರಾ ಅಣೆಕಟ್ಟು ನಿಂದ 51 ಸಾವಿರ ಕ್ಯೂಸೆಕ್ಸ ನೀರು ನದಿಗೆ ಬಿಡಲಾಗಿದೆ. ನದಿ ದಂಡೆಯ ಗ್ರಾಮಗಳ ಕುಟುಂಬಗಳ ರಕ್ಷಣೆಗೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿಯಾದ ಕೆಲ ಮಾಧ್ಯಮಗಳ ಜೊತೆ ಮಾತನಾಡಿದ ಅವರುಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳಿದೆ. ಆದರೂ ನಾವು ಕಾಳಜಿ ಕೇಂದ್ರ ತೆರೆಯಲು ಸನ್ನದ್ಧರಾಗಿದ್ದೇವೆ .ಲಿಂಗನಮಕ್ಕಿ ಠಿಅಣೆಕಟ್ಟು ನೀರು ಹರಿದು ಹೊನ್ನಾವರ ತಾಲ್ಲೂಕಿನಗೇರುಸೊಪ್ಪ ಅಣೆಕಟ್ಟಿಗೆ ಬರುತ್ತದೆ. ಗೇರುಸೊಪ್ಪೆಯಿಂದ 50 ಕ್ಯೂಸೆಕ್ಸ ನೀರು ಬಿಟ್ಟಾಗ ಸುಮಾರು 160 ಕುಟುಂಬಕ್ಕೆ ತೊಂದರೆಯಾಗುತ್ತದೆ. ಕಾರಣ ಶಿಫ್ಟ್ ಮಾಡಲಾಗುತ್ತದೆ. ಇದಕ್ಕಾಗಿ ಕಂದಾಯ ಅಧಿಕಾರಿಗಳು ಸಜ್ಜಾಗಿದ್ದಾರೆ. ಸದ್ಯಕ್ಕೆ 15 ಸಾವಿರ ಕ್ಯೂಸೆಕ್ಸ ಮಾತ್ರ ಬಿಡಲಾಗಿದೆ. ಸದ್ಯಕ್ಕೆ 3 ಕಾಳಜಿ ಕೇಂದ್ರ ಓಪನ್ ಮಾಡಲಾಗಿದೆ. 101 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಒಂದು ಲಕ್ಷ ಕ್ಯೂಸೆಕ್ಸ ನೀರು ಒಮ್ಮೆಲೆ ಬಿಟ್ಟರೆ , 16 ಪಂಚಾಯತ್ ಗಳ 163 ಮನೆ, ಕುಟುಂಬಗಳಿಗೆ ಸ್ಥಳಾಂತರ ಅವಶ್ಯಕತೆ ಇರುತ್ತದೆ .ಸದ್ಯ ಅಂತಹ ಸನ್ನಿವೇಶ ಇಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಲಿಂಗನಮಕ್ಕಿ ಯಿಂದ ಗೇರುಸೊಪ್ಪ ಹಾಗೂ ನಂತರ ಶರಾವತಿ ನದಿ ದಂಡೆಯ ಗ್ರಾಮಗಳಿಗೆ ತಲುಪಲು5 ತಾಸು ಬೇಕಾಗುತ್ತದೆ. ನೀರು ಬಿಡುವ ಸೂಚನೆ ಮೊದಲೇ ಬರುವ ಕಾರಣ, ಮುಂಜಾಗ್ರತೆ ವಹಿಸಲು ಸಮಯ ಸಿಗುತ್ತದೆ ಎಂದರು.ಕದ್ರಾ ಅಣೆಕಟ್ಟು ನೀರು ಬಿಟ್ಟಾಗ ಸಮಸ್ಯೆ ಬರುವುದಿಲ್ಲ. ಅಲ್ಲಿ ವಿದ್ಯುತ್ ಉತ್ಪಾದನೆಗೆ 20 ಸಾವಿರ ಕ್ಯೂಸೆಕ್ಸ ನೀರು ದಿನವೂ ಬಳಸುತ್ತಾರೆ. 30 ಮೀಟರ್ ಎತ್ತರ ನೀರು ಸಂಗ್ರಹವಾದಾಗ ತಕ್ಷಣ ನೀರು ಕ್ರಸ್ಟ್ ಗೇಟ್ ನಿಂದ ನೀರು ಹೊರಬಿಡುತ್ತಾರೆ. ಮಂಗಳವಾರ ಒಟ್ಟು 51 ಸಾವಿರ ಕ್ಯೂಸೆಕ್ಸ ನೀರು ಹೊರಬಿಡಲಾಗಿದೆ.ಡ್ಯಾಮ್ ಲೆವೆಲ್ ನೀರು ಸಂಗ್ರಹ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ 203 ಹಳ್ಳಿಗಳು ಭೂ ಕುಸಿತ ಮುಂತಾದ ಸಮಸ್ಯೆ ಎದುರಿಸುತ್ತಿವೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರು ವರದಿ ನೀಡಿದ್ದಾರೆ. ಈ ಮಳೆಗಾಲದಲ್ಲಿ ಹೆಚ್ಚು ಅಪಾಯ ಉಂಟಾಗಿಲ್ಲ. ಶಿರೂರು ದುರಂತದಲ್ಲಿ ಮನೆಕಳೆದು ಕೊಂಡ ಹತ್ತು ಕುಟುಂಬ ಗಳಿಗೆ ಉಳುವರೆಯಲ್ಲಿ ಭೂಮಿ ನೀಡಿದ್ದು, ಮನೆಗಳು ನಿರ್ಮಾಣ ಹಂತದಲ್ಲಿವೆ . ಮೊ ಹಂತದ ಹಣ 1.20 ಲಕ್ಷ ಫಲಾನುಭವಿಗಳಿಗೆ ನೀಡಲಾಗಿದೆ ಎಂದರು . ಗಂಗಾವಳಿ ನದಿಯಲ್ಲಿ ಬಿದ್ದ ಭೂ ಕುಸಿತದ ಮಣ್ಣಿನ ಹೂಳನ್ನು ಮಳೆಗಾಲದ ನಂತರ ಟೆಂಡರ್ ಕರೆದು ತೆಗೆಸಲಾಗುವುದು ಎಂದರು. ಯಲ್ಲಾಪುರ ಕಳಚೆಯಲ್ಲಿ ಹದಿನಾರು ಸ್ಪಾಟ್ ಗಳಲ್ಲಿ ಅಪಾಯ ಇದೆ ಎಂದು ಗುರುತಿಸಲಾಗಿದೆ. ಪರ್ಯಾಯ ಜಾಗ ಗುರುತಿಸಲಾಗಿದೆ. ಅಲ್ಲಿಗೆ ತೆರಳುವವರು ,ಅಪಾಯದ ಜಾಗ ಬಿಡುವ ಬಗ್ಗೆ ಮುಚ್ಚಳಿಕೆ ಬರೆದುಕೊಡಬೇಕು. ಆಗ ಪರ್ಯಾಯ ಜಾಗ ಆಯ್ಕೆ ಸಾಧ್ಯ ಎಂದರು. ಈ ಕ್ರಿಯೆ ಸರ್ಕಾರದ ಚಿಂತನೆ ಹಂತದಲ್ಲಿದೆ ಎಂದರು. ಭೂಕುಸಿತದ ಬಗ್ಗೆ ಅಂತಿಮ ವರದಿ ಬರಬೇಕಿದೆ ಎಂದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 