ಏಪ್ರಿಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಸಶಸ್ತ್ರ ಪಡೆಗಳ ನಿಯೋಜನೆ ಕುರಿತ ವದಂತಿಗಳು ಸಂಪೂರ್ಣ ಸುಳ್ಳು: ಭಾರತೀಯ ಸೇನೆ
ನವದೆಹಲಿ,
ಮಾರ್ಚ್ 30 - ದೇಶದಲ್ಲಿ ಏಪ್ರಿಲ್ ತಿಂಗಳ ಮಧ್ಯೆ ತುರ್ತು ಪರಿಸ್ಥಿತಿ
ಘೋಷಿಸಿ, ಸಶಸ್ತ್ರ ಪಡೆಗಳ ನಿಯೋಜನೆ ಮಾಡಲಾಗುವುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ
ಸಂದೇಶಗಳನ್ನು ಸಂಪೂರ್ಣ ಸುಳ್ಳು ಎಂದಿರುವ ಭಾರತೀಯ ಸೇನೆ,ಕರೋನವೈರಸ್ನಿಭಾಯಿಸಲು ಯೋಧರು
ಮತ್ತು ರಾಷ್ಟ್ರೀಯ ಕೆಡೆಟ್ ಕೋರ್(ಎನ್ಸಿಸಿ) ಅನ್ನು ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು
ನಿಯೋಜಿಸಲಾಗುವುದು.ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹರಿದಾಡುತ್ತಿರುವ ಸಂದೇಶಗಳು ಸಂಪೂರ್ಣ ಸುಳ್ಳು ಎಂದು ಸೇನೆ ಟ್ವೀಟ್ ಮೂಲಕ ತಿಳಿಸಿದೆ. ಈ
ಮಧ್ಯೆ, ರಾಷ್ಟ್ರವ್ಯಾಪಿ ಕರೆ ನೀಡಲಾಗಿರುವ 21 ದಿನಗಳ ಲಾಕ್ಡೌನ್ ಅವಧಿಯನ್ನು ಏಪ್ರಿಲ್
14 ನಂತರ ವಿಸ್ತರಿಸಲಾಗುವುದು ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಸರ್ಕಾರ ಸೋಮವಾರ
ತಳ್ಳಿಹಾಕಿದೆ.ಕೆಲವು ಮಾಧ್ಯಮಗಳ ವರದಿಗಳಲ್ಲಿನ ಊಹಾಪೋಹಗಳನ್ನು ತಿರಸ್ಕರಿಸಿರುವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಇವೆಲ್ಲ ನಿರಾಧಾರ ಎಂದು ಹೇಳಿದ್ದಾರೆ.ಸಂಪುಟ ಕಾರ್ಯದರ್ಶಿಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಹಿತಿ ಬ್ಯೂರೋ (ಪಿಐಬಿ) ಸಹ ಈ ವರದಿಗಳನ್ನು ತಿರಸ್ಕರಿಸಿಟ್ವೀಟ್ ಮಾಡಿದೆ.21
ದಿನಗಳ ಲಾಕ್ಡೌನ್ಅವಧಿ ಮುಗಿದ ನಂತರ ಮತ್ತೆ ಅವಧಿಯನ್ನು ವಿಸ್ತರಿಸಲಾಗುವುದು ಎಂಬ
ವದಂತಿಗಳು ಹಬ್ಬಿದ್ದು, ಕೆಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ, ಈ ವರದಿಗಳು
ಆಧಾರರಹಿತವಾಗಿವೆ ಎಂದು ಹೇಳಿರುವ ಸಂಪುಟ ಕಾರ್ಯದರ್ಶಿಯವರು ಇವುಗಳನ್ನು
ತಿರಸ್ಕರಿಸಿದ್ದಾರೆ ಎಂದು ಎಂದು ಪಿಐಬಿ ಸೋಮವಾರ ಬೆಳಿಗ್ಗೆ ತಿಳಿಸಿದೆ. ವ್ಯಾಪಕವಾಗಿ
ಹರಡುತ್ತಿರುವ ಕರೋನವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ
ನರೇಂದ್ರ ಮೋದಿ ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ ಇಡೀ ದೇಶವನ್ನು ಸಂಪೂರ್ಣ ಲಾಕ್
ಡೌನ್ (ಸಂಪೂರ್ಣ ಸ್ತಬ್ಧ)ಗೆ ಘೋಷಿಸಿದ್ದಾರೆ. ಲಾಕ್ಡೌನ್ಭಾಗವಾಗಿ ಅನಿವಾರ್ಯವಲ್ಲದ ಎಲ್ಲ
ಸೇವೆಗಳನ್ನು ನಿಷೇಧಿಸಲಾಗಿದೆ.ಇಲ್ಲಿಯವರೆಗೆ, ಭಾರತೀಯ ಸೇನೆಯು ಮೂವರು
ಸಿಬ್ಬಂದಿಯಲ್ಲಿ ಕೊರೊನವೈರಸ್ದೃಢಪಟ್ಟಿದೆ. ಕೋಲ್ಕತ್ತಾದ ಕಮಾಂಡ್ ಆಸ್ಪತ್ರೆಯಲ್ಲಿ
ಕರ್ನಲ್ ಹುದ್ದೆಯಲ್ಲಿರುವ ಒಬ್ಬ ವೈದ್ಯರು ಹಾಗೂ ಡೆಹ್ರಾಡೂನ್ನ ಸೇನಾ ನೆಲೆಯಲ್ಲಿ ಸೇವೆ
ಸಲ್ಲಿಸುತ್ತಿರುವ ವೈದ್ಯರೊಬ್ಬರಲ್ಲಿ ಭಾನುವಾರ ಸೋಂಕು ದೃಢಪಟ್ಟಿದೆ.ಈ ಹಿಂದೆ, ಲೇಹ್ನಲ್ಲಿ ಯೋಧನೊಬ್ಬನಿಗೆ ಕರೋನವೈರಸ್ಸೋಂಕು ದೃಢಪಟ್ಟಿತ್ತು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 