ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಹೋರಹೊಮ್ಮಬೇಕು: ಬಾಳಗೌಡಾ ಪಾಟೀಲ
Students should strive to become good citizens: Balgouda Patil
ಯಮಕನಮರಡಿ, 14 : ಸ್ಥಳಿಯ ಸಿ ಇ ಎಸ್ ವಾಣೀಜ್ಯ ಮಹಾವಿದ್ಯಾಲಯದ ವಿಧ್ಯಾರ್ಥಿಗಳ 2025-26 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟಣಾ ಸಮಾರಂಭವು ದಿ.14 ರಂದು ಶಾಲಾ ಸಭಾಭವನ ದಲ್ಲಿ ಕರೆಯಲಾಗಿತ್ತು ಮುಖ್ಯ ಅತಿಥಿಗಳಾಗಿ ಸಂಕೆಶ್ವರ ನಿವೃತ್ತ ಪ್ರಧ್ಯಾಪಕರಾದ ಬಾಳಗೌಡಾ ಪಾಟೀಲ ರವರು ಆಗಮಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಮೊಬೈಲ ದಾಸರಾಗದೇ ವಿಧ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು ಅವಶ್ಯ ಬಿದ್ದರೇ ಮಾತ್ರ ಮೊಬೈಲ ಬಳಸಬೇಕು ವಿಧ್ಯಾರ್ಥಿಗಳಾಗಲಿ ವಿಧ್ಯಾರ್ಥಿನಿಯರಾಗಲಿ ಎಲ್ಲ ವಿಷಯದಲ್ಲಿ ಪರಿವರ್ತನೆ ಹೊಂದಿದವರಾಗಿರಬೇಕು ಸಿ ಇ ಎಸ್ ಸಂಸ್ಥೆಯ ಸುಮಾರು 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹೋರ ದೇಶಗಳಲ್ಲಿ ಉನ್ನತ ಹುದ್ದೇಗಳಲ್ಲಿ ನೌಕರಿ ಮಾಡುತ್ತಿದ್ದಾರೆ ಅದರ ಕಿರ್ತಿ ಸಿ ಇ ಎಸ್ ಸಂಸ್ಥೆಗೆ ಸಲ್ಲುತ್ತದೆ.
ಅಲ್ಲದೆ ಇಲ್ಲಿಯ ಉಪನ್ಯಾಸಕರಿಗೂ ಸಲ್ಲುತ್ತದೆ. ತಮ್ಮ ಭವಿಷ್ಯಕ್ಕಾಗಿ ನಿಮ್ಮ ತಂದೆ ತಾಯಂದಿರು ಹೊಲ ಗದ್ದೆಗಳಲ್ಲಿ ಶ್ರಮ ಪಟ್ಟು ನಿಮ್ಮ ಉತ್ತಮಪ್ರಜೆಗಳಾಗಿಸಲು ಹಗಲಿರುಲು ದುಡಿದು ನಿಮಗೆ ಶಾಲೆ ಕಲಿಸುತ್ತಾರೆ. ಅವರ ಆಸೆಯನ್ನು ಅದುಪಯೋಗ ಮಾಡಿಕೊಂಡು ಉತ್ತಮ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಪ್ರತಿಯೊಬ್ಬರು ದೇಶ ಕಾಯುವ ಸೈನಿಕರನ್ನು ಜನ್ಮ ಕೊಟ್ಟ ತಂದೆ ತಾಯಂದಿರನ್ನು ಎಂದಿಗೂ ಮರೆಯಬಾರದು ಪ್ರಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಕುಮಾರಿ ಅರುಣಾ ಸೂಜಿ ಅವರು ಸ್ವಾಗತಪರ ಭಾಷಣ ಮಾಡಿದರು.
ಪ್ರಾಸ್ತಾವಿಕವಾಗಿ ನಿವೃತ್ತ ಪ್ರಾಚಾರ್ಯ ಪಿ ಬಿ ಅವಲಕ್ಕಿ ಮತ್ತು ಪಿ ಯು ಕಾಲೇಜಿನ ಪ್ರಾಚಾರ್ಯ ವ್ಹಿ ಬಿ ನಾಶಿಪುಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಇದೆ ಸಂದರ್ಬದಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಅತಿಥಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ವೀರಣ್ಣಾ ದುಗಾಣಿ ಉಪಸ್ಥಿತರಿದ್ದು ಸಂಸ್ಥೆಯ ಕಾನ್ವೇಂಟ್ ಶಾಲೆ ಶಿಕ್ಷಕರು ಉಪಸ್ಥಿತರಿದ್ದು ನಿರೂಪಣೆಯನ್ನು ಶ್ರೀಮತಿ ಕಮತಿಗೆ ನಡೆಸಿಕೊಟ್ಟರು ಉಪನ್ಯಾಸಕರಾದ ಶ್ರೀಮತಿ ವಂದಾಳೆ ವಂದಿಸಿದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 