ವಿದ್ಯಾರ್ಥಿಗಳ ಜುಡೋ ಸ್ಪರ್ಧೆ : ರಾಜ್ಯ ಮಟ್ಟಕ್ಕೆ ಆಯ್ಕೆ
ಜಮಖಂಡಿ 02:ನಗರದ ಭಕ್ತ ಕನಕದಾಸ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಜುಡೋ ಸ್ಪರ್ಧೆಯಲ್ಲಿ ಸ್ಥಳೀಯ ಭಕ್ತ ಕನಕದಾಸ ಪ್ರೌಢಶಾಲೆಯ ವಿದ್ಯಾರ್ಥಿಗಳು ಜುಡೋ ಸ್ಪಧರ್ೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕ, ಬಾಲಕಿಯರು ಪ್ರಥಮ ಸ್ಥಾನ 18 ವಿದ್ಯಾರ್ಥಿಗಳು, 8 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು 55 ಕೆಜಿ.ಯಲ್ಲಿ ದೇವಣ್ಣ ನಿಂಬಾಳಿ, 60 ಕೆಜಿ.ಯಲ್ಲಿ ಬೀರಪ್ಪ ಕುರಿ, 66 ಕೆಜಿ.ಯಲ್ಲಿ ಸಚಿನ ಉಪ್ಪಾರ, 73 ಕೆಜಿಯಲ್ಲಿ ಶರೀಫ ನದಾಫ, 40 ಕೆಜಿಯಲ್ಲಿ ನೀಲಮ್ಮ ಕುರಿ, 44 ಕೆಜಿಯಲ್ಲಿ ರೂಪಾ ನಿಂಬಾಳಿ, 40 ಕೆಜಿಯಲ್ಲಿ ಯಶೋಧಾ ಕಲ್ಲೂರ, 44 ಕೆಜಿಯಲ್ಲಿ ಗೀತಾ ನಿಂಬಾಳಿ, 48 ಕೆಜಿ ಅಮೂಲ್ಯ ಮಳಲಿ, 52 ಕೆಜಿ ಸರಸ್ವತಿ ಒಂಟಿ, 70 ಕೆಜಿಯಲ್ಲಿ ತಿಪ್ಪವ್ವ ಗುಜ್ಜನವರ ಹಾಗೂ ಪ್ರಾಥಮಿಕ ವಿಭಾಗದಲ್ಲಿ 50 ಕೆಜಿಯಲ್ಲಿ ಉಜೇಫ ಜಮಾದಾರ, 55 ಕೆಜಿಯಲ್ಲಿ ಅಬ್ದುಲ್ ಜನವಾಡ, 30 ಕೆ.ಜಿ.ಯಲ್ಲಿ ಭರತ ಲಮಾಣಿ, 45 ಕೆ.ಜಿಯಲ್ಲಿ ಪಜ್ವಲ ಸಾವಂತ, 50 ಕೆಜಿ ಅಭಿಷೇಕ, ಬೀಳಗಿ ಈ ಎಲ್ಲಾ ಕ್ರೀಡಾಪಟುಗಳು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರಿಗೆ ಸಂಘದ ಅಧ್ಯಕ್ಷ ನಾಗಪ್ಪ ಸನದಿ, ಉಪಾಧ್ಯಕ್ಷ ಅರ್ಜುನ ದಳವಾಯಿ,ಈಶ್ವರ ವಾಳೆನ್ನವರ, ಎಂ.ಎಸ್.ಜಕ್ಕಣ್ಣವರ ಹಾಗೂ ಮುಖ್ಯಗುರು ಎಸ್.ಕೆ.ಕರಡಿ,ಸಿಬ್ಬಂದಿ ವರ್ಗ ಅಭಿನಂದಸಿದೆ.