ಹೂವಿನ ಹಡಗಲಿ

ವಿಧಿಬಲಿ ಕಿರು ಚಿತ್ರಕ್ಕೆ ಚಾಲನೆ

ವಿಧಿಬಲಿ ಕಿರು ಚಿತ್ರಕ್ಕೆ ಚಾಲನೆ

ಹೂವಿನಹಡಗಲಿ 27: ಹಳ್ಳಿಗಳಲ್ಲಿ ಇಂದಿಗೂ ಜಾನಪದ, ದೊಡ್ಡಾಟ ಸೇರಿದಂತೆ ಎಲ್ಲ ರೀತಿಯ ಕಲೆಗಳು ಜೀವಂತವಾಗಿವೆ. ಆದರೆ ಅವುಗಳಿಗೆ ಜಾತಿ ಲೇಪನ ಸಲ್ಲದು ಕೊಂಬಳಿ ಚೌಕಿ ಮಠದ ಸದ್ಗುರು ಗಾಡಿ ತಾತಾ ಸ್ವಾಮೀಜಿ ನುಡಿದರು. 

ಪಟ್ಟಣದ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲೋನಿಯ ಗಣೇಶ ದೇವಸ್ಥಾನದಲ್ಲಿ ನಡೆದ ಲಕ್ಷ್ಮಿ ನರಸಿಂಹಪ್ಪ, ದಿವಾಕರ್ ಪ್ರೊಡಕ್ಷನ್ ಆಯೋಜಿಸಿದ್ದ ವಿಧೀಬಲಿ ಕಿರು ಚಲನಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರು ವ್ಯಕ್ತಿಯ ಕಲೆಗೆ ಗೌರವಿಸುವ ಗುಣವಿರಬೇಕು ಎಂದರು. 

ಜಿ.ಪಂ.ಸದಸ್ಯ ಪಿ.ವಿಜಯಕುಮಾರ ಮಾತನಾಡಿ ರಾಜ್ಯಮಟ್ಟದಲ್ಲಿ ಮಲ್ಲಿಗೆ ನಾಡಿನ ಸಂಸ್ಕೃತಿ,ಪರಂಪರೆಯನ್ನು ಪರಿಚಯಿಸಿದ ಮಾಝಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಎಲ್ಲ ಕಲಾವಿರನ್ನು ಮುಖ್ಯ ವಾಹಿನಿಗೆ ತರುವಂತಹ ಕೆಲಸ ಮಾಡಿದ್ದಾರೆ ಜತೆಗೆ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.ಪತ್ರಕರ್ತ ಎಸ್‌.ನಿಂಗರಾಜ,ವರ್ತಕ ಮಂಜುನಾಥ ಮಾತನಾಡಿದರು. ಮಹಾಬಲೇಶ್ವರ ದಿವಾಕರ್ ,ಡಾ.ಮಲ್ಲಿಕಾರ್ಜುನ, ನಿರ್ದೇಶಕ ಯುವನಟ ಎಸ್‌.ಎನ್‌.ಕ್ರಾಂತಿ, ಗಾಯಕ ತಿಪ್ಪೇಸ್ವಾಮಿ ಇದ್ದರು. 


ಸುದ್ದಿ ಓದಿ