ಉಡಿ ತುಂಬುವುದು ದೇಸಿ ಸಂಸ್ಕೃತಿ: ಅಭಿನವ ರಾಚೋಟೇಶ್ವರ ಶ್ರೀ
Sri Varamahalakshmi Puja program
ಲೋಕದರ್ಶನ ವರದಿ
ಇಂಡಿ 27: ಮಹಿಳೆಯವರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.
ಅವರು ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ (ಜೋಡಗುಡಿ) ಶ್ರೀ ಮರುಳಸಿದ್ದೇಶ್ವರ ಮಂಗಲ ಕಾರ್ಯಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಇಂಡಿ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಹಾಗೂ ವಲಯ ಮಟ್ಟದ ಮಹಿಳಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಖ್ಯಾತ ಪುರಾಣಿಕರಾದ ಶ್ರೀ ಶಿವಾನಂದಯ್ಯ ಶಾಸ್ತ್ರಿಗಳು ಆರ್ಶಿವಚನ ನೀಡಿ ಮಾತನಾಡಿದ ದೇವಿಯ ಪೂಜೆಯನ್ನು, ದೇವಿಗೆ ಉಡಿ ತುಂಬಿಸಿ (ಸೀರೆ ಮತ್ತು ಖಣವನ್ನು (ರವಕೆಯ ಬಟ್ಟೆ) ಅರ್ಿಸಿ) ಮುಕ್ತಾಯ ಮಾಡಬೇಕು. ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು ಮಾಡಲು ದೇವಿಯ ನಿರ್ಗುಣ ತತ್ತ್ವವನ್ನು ಸಗುಣದಲ್ಲಿ ಬರಲು ಆವಾಹನೆ ಮಾಡುವುದು. ದೇವಿಗೆ ಸೀರೆ ಮತ್ತು ಖಣವನ್ನು ಅರ್ಿಸುವಾಗ, ದೇವಿಗೆ ಕಾರ್ಯವನ್ನು ಮಾಡಲು ಪ್ರಾರ್ಥನೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು, ತಮ್ಮಣ್ಣಾ ಪೂಜಾರಿ ಅವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಬದುಕು ಬದಲಾವಣೆಯಾಗಿದೆ. ಮಹಿಳೆಯರಿಗೆ ಆರ್ಥಿಕ ಸಾಹಯ ಸಹಕಾರದಿಂದ ಅವರು ತಮ್ಮ ಬದುಕು ಬದಲಾವಣೆಯೊಂದಿಗೆ ಈ ಸಮಾಜದಲ್ಲಿ ಮುಂಚೂಣಿಯಲ್ಲಿ ಬಂದು ಬದುಕುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ ಅವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಅವರು ಮಹಿಳೆಯರಿಗೆ ಉಡಿ ತುಂಬುವುದರ ಮೂಲಕ ಮಹಿಳೆಯರ ಆತ್ಮವಿಶ್ವಾಸವನನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಂಡಿ ತಾಲೂಕು ಯೋಜನಾಧಿಕಾರಿ ಕೆ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಶೋಕ ಮಿರ್ಜಿ, ಮೇಲ್ವಿಚಾರಕರಾದ ಅಶ್ವಿನಿ ಸಂಗೋಳ್ಳಿ, ಶಶಿಧರ್ ಬಡಿಗೇರ, ಶ್ರೀಶೈಲ ಇಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 