ಇಂದಿನಿಂದ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ
Sri Tarakeshwara Jatra festival begins today
ಆಲಮೇಲ 10 : ತಾಲೂಕಿನ ಭೀಮಾ ನದಿಯ ದಂಡೆಯಲ್ಲಿ ಇರುವ ಕಾಶಿಯ ಕಡಿಯ ಬಾಗಿಲೆಂದು ಹೆಸರುವಾಸಿಯಾಗಿರುವ ಸುಕ್ಷೇತ್ರ ತಾರಾಪೂರ ಗ್ರಾಮದಲ್ಲಿ ತಾರಕೇಶ್ವರ ಜಾತ್ರಾ ಮಹೋತ್ಸವ ಹಾಗೂ ಗುರು ಸಂಸ್ಥಾನ ಹಿರೇಮಠದ ಷಬ್ರ ಮುರುಘರಾಜೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವದ ಜರಗುವುದು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತೀ ವಿಜೃಂಭಣೆಯಿಂದ ಪರಮಪೂಜ್ಯ ತ್ರಿಕಾಲ ಜ್ಞಾನಿಗಳು ಪೂಜಾ ನಿಷ್ಠುರು ಷಬ್ರ ಗುರುಲಿಂಗ ಶಿವಾಚಾರ್ಯರು ಗುರು ಸಂಸ್ಥಾನ ಹಿರೇಮಠ ತಾರಾಪೂರ ಇವರ ಕೃಪ ಆಶೀರ್ವಾದದಿಂದ ಜಾತ್ರಾ ಮಹೋತ್ಸವ ನಡೆಯುವುದು ದಿನಾಂಕ 11/4/2026 ಶನಿವಾರ ರಂದು ರಾತ್ರಿ 9=00 ಗಂಟೆಗೆ ಊರ ಗುಡಿಯಿಂದ ಪಲ್ಲಕ್ಕಿ ಉತ್ಸವವನ್ನು ಸಕಲ ವಾದ್ಯ ವೈಭವದುಗಳೊಂದಿಗೆ ಮೇಲಿನ ಗುಡಿಗೆ ಹೋಗೋದು. ನಂತರ ದೀಪೋತ್ಸವ ಜರುಗುವುದು ನಂತರ ಅಗ್ನಿ ಪುಟುವು ಮಾಡುವುದುದಿನಾಂಕ 12/4/2026 ರವಿವಾರ ರಂದು ಬೆಳಗ್ಗೆ 7=00 ಗಂಟೆಗೆ ತಾರಕೇಶ್ವರ ದೇವರ ರುದ್ರಭಿಷೇಕ ನಡೆಯುವುದು ನಂತರ ಬೆಳಗ್ಗೆ 10=00 ಗಂಟಿಗೆ ದೇವರ ಪಲ್ಲಕ್ಕಿಯು ಗಂಗಸ್ಥಳ ಮಾಡಿಕೊಂಡು ಪುರವಂತರೊಂದಿಗೆ ಸುಮಂಗಲಿಯರ ಕಳಸ ದೊಂದಿಗೆ ಸಕಲ ವಾದ್ಯ ವೈಭವಗಳೊಂದಿಗೆ.
ಗ್ರಾಮದಲ್ಲಿ ಪಲ್ಯಕ್ಕೆ ಮೆರವಣಿಗೆ ನಡೆಯುವುದು.ನಂತರ ಮಧ್ಯಾಹ್ನ 12=00 ಗಂಟೆಗೆ ಅಗ್ನಿ ಪ್ರವೇಶ ನಡೆಯುವುದು ತದ ನಂತರ ಬಂದಂತ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಇರುವುದುಅದೇ ರಾತ್ರಿ 8=00 ಗಂಟೆಗೆ ತನುವಿನ ಬಿಂದಿಗೆ ಒಂದಿಗೆ ಹೇಳಿಕೆಗಳನ್ನು ನಡೆಯುವುದುತದ ನಂತರ ರಾತ್ರಿ 9=00 ಗಂಟೆಗೆ ಚಿತ್ರ ವಿಚಿತ್ರ ಮದ್ದು ಸುಡುವುದು ಹಾಗೂ ದಿನಾಂಕ 12/ 4/2026 ರವಿವಾರ ಹಾಗೂ 14/4/2026 ಮಂಗಳವಾರ ರಂದು ರಾತ್ರಿ 10 =30 ನಿಮಿಷಕ್ಕೆ ದಾವಲಮಲಿಕ ನದಾಪ ತಡವಲಗಾ ತಾಲೂಕ ಇಂಡಿ ಇವರ ಭವ್ಯ ರಂಗ ಸಜ್ಜಕೆಯಲ್ಲಿ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ಇವರಿಂದ ಪ್ರಥಮ ಪ್ರವೇಶ ಮುತ್ತಿನಂತ ಅತ್ತಿಗೆ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದುಹಾಗೂ ದಿನಾಂಕ 14/4/2026 ಮಂಗಳವಾರ ರಂದು ದ್ವಿತೀಯ ಪ್ರವೇಶ ಕುಡುಕ ಕಲ್ಯಾ ಸಿಡಕ ಮಲ್ಲಿ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದು ಎಂದು ತಾರಕೇಶ್ವರ ದೇವಾಲಯ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ಶರಣಗೌಡ ಗುರುಬಸಪ್ಪ ಗೌಡ ಬಿರಾದಾರ ಹಾಗೂ ಸಮಿತಿಯ ಸದಸ್ಯರು ತಿಳಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 