ಶ್ರೀ ಬಲಭೀಮ ದೇವಸ್ಥಾನದ ಜಾತ್ರಮಹೋತ್ಸವ
Sri Balabhima Temple Fair
ಗೋಕಾಕ, 19 : ನಗರದ ಉಪ್ಪಾರ ಓಣಿಯ ಶ್ರೀ ಬಲಭೀಮ(ಮಾರುತಿ) ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ದಿ.20ರಿಂದ 24ರವರೆಗೆ 5 ದಿನಗಳ ಕಾಲ ಅತೀ ವಿಜೃಂಭನೆಯಿಂದ ಜರುಗಲಿದೆ.
ದಿ.20ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಹಾಲಿನ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.21ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಮೊಸರಿನ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.22ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ತುಪ್ಪದ ಅಭಿಷೇಕ ಹಾಗೂ ಶ್ರೀ ಅನಂತಸುಬ್ರಮಣ್ಯ ಜೋಶಿ ಪುರೋಹಿತರಿಂದ ಸುದರ್ಶನ ಹೋಮ ಜರುಗಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ನಗರದ ಸುತ್ತಮುತ್ತಲಿನ ದೇವಸ್ಥಾನಗಳ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು. ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.23ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಜೇನುತುಪ್ಪ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 8 ಗಂಟೆಗೆ ಶ್ರೀ ಬಲಭೀಮ ದೇವರ ಪಲ್ಲಕ್ಕಿ ಉತ್ಸವವು ಪ್ರಮುಖ ಬೀದಿಗಳ ಮೂಲಕ ವಾದ್ಯಮೇಳದೊಂದಿಗೆ ಮೆರವಣಿಗೆ ಜರುಗುವುದು. ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.24ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಹಣ್ಣು ಮತ್ತ ಸಕ್ಕರೆ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ವಿಶ್ವಾಧಿರಾಜತೀರ್ಥ ಮಹಾಸ್ವಾಮಿಗಳು ಇವರಿಂದ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ ಎಂದು ಜಾತ್ರಾ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 