ರಾಜ್ಯದ ಗಡಿ ಕುಗ್ರಾಮದ ಶಿವಾನಂದ ಬಡಿಗೇರ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 19050 ರ್ಯಾಂಕ್..!
Shivananda Badigera, a village on the state's border, ranks 19050th in the country in the MBBS entra
ರಾಜ್ಯದ ಗಡಿ ಕುಗ್ರಾಮದ ಶಿವಾನಂದ ಬಡಿಗೇರ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 19050 ರ್ಯಾಂಕ್..!
ಕಾಗವಾಡ 14 : ಅತೀ ಹಿಂದೂಳಿದ ವಿಶ್ವಕರ್ಮ ಸಮಾಜದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಸೌಲಭ್ಯಗಳಿಲ್ಲದ ಕುಗ್ರಾಮದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆದುಕೊಳ್ಳದೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು, ಇಂದು ದೇಶ ಮಟ್ಟದ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 19050 ಮತ್ತು ರಾಜ್ಯಕ್ಕೆ 1030 ರ್ಯಾಂಕ್ ಪಡೆದು, ಆಯ್ಕೆಯಾಗಿದ್ದಕ್ಕೆ ನಮ್ಮ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾನೆಂದು ವಿಶ್ವಕರ್ಮ ಸಮಾಜದ ಮುಖಂಡ ಶ್ರೀಶೈಲ ಬಡಿಗೇರ ಹೇಳಿದರು. ಅವರು, ರವಿವಾರ ದಿ. 14 ರಂದು ತಾಲೂಕಿನ ಮೋಳೆ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದಿಂದ ಎಂಬಿಬಿಎಸ್ ಪದವಿಗೆ ಆಯ್ಕೆಗೊಂಡಿರುವ ಶಿವಾನಂದ ಮಹಾದೇವ ಬಡಿಗೇರ ಅವರಿಗೆ ಏರಿ್ಸದಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ವಿಶ್ವಕರ್ಮ ಸಮಾಜ ಅತ್ಯಂತ ಬಡತನದಿಂದ ಕೂಡಿದ್ದು, ತಮ್ಮ ಕಲೆಯ ಮೂಲಕ ಜೀವನ ಸಾಗಿಸುತ್ತಿದ್ದು, ಇಂತಹ ಕುಟುಂಬದಲ್ಲಿ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇ. 93 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಇತ್ತಿಚಿಗೆ ನಡೆದ ನಿಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮೈಸೂರಿನ ಮೆಡಿಕಲ್ ಕಾಲೇಜಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು. ಶಿಕ್ಷಕ ಮಹಾದೇವ ಬಡಿಗೇರ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟೊದ ಗಡಿ ಭಾಗ, ಮೂಲಸೌಲಭ್ಯ ವಂಚಿತ ಮೋಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿ, ನಂತರ ಜಮಖಂಡಿಯ ಕಾಲೇಜಿನಲ್ಲಿ ಕಷ್ಟಪಟ್ಟು ಪಿಯುಸಿ ಓದಿ, ಶೇ. 93 ರಷ್ಟು ಅಂಕ ಪಡೆದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ತರಬೇತಿಯನ್ನು ಪಡೆಯದೇ ನಿಟ್ ಪರೀಕ್ಷೆಯಲ್ಲಿ ಎಂಬಿಬಿಎಸ್ಗೆ ಅರ್ಹತೆ ಪಡೆದಿರುವುದು ನಮ್ಮ ಗ್ರಾಮದ ಹಾಗೂ ನಮ್ಮ ಸಮಾಜದ ಹಿರಿಮೆಯನ್ನು ಹೆಚ್ಚಿಸಿದ್ದಾನೆ ಎಂದರು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಶಿವಾನಂದ ಬಡಿಗೇರ, ಸತತ ಪರಿಶ್ರಮ, ಓದು, ತಂದೆ-ತಾಯಿ, ಶಿಕ್ಷಕರ ಮಾರ್ಗದರ್ಶನ ಪಡೆದು, ಈ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಯಾವುದೇ ಪರೀಕ್ಷೆ ಎದುರಿಸಲು ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಓದುವ ಛಲವೊಂದಿದ್ದರೇ ಎಂತಹ ಸಾಧನೆಯನ್ನು ಮಾಡಬಹುದಾಗಿದೆ ಎಂದರು. ಈ ವೇಳೆ ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀಶೈಲ ಬಡಿಗೇರ, ಮಹಾದೇವ ಬಡಿಗೇರ, ಭಾಗೀರಥಿ ಬಡಿಗೇರ ಸುಧಾಕರ ಬಡಿಗೇರ, ಅಣ್ಣಪ್ಪಾ ಬಡಿಗೇರ, ರವೀಂದ್ರ ಬಡಿಗೇರ, ವಿನೋದ ಮಹೇಶ್ಕರ, ತಾತ್ಯಾಸಾಬ ಬಡಿಗೇರ, ಕುಮಾರ ಬಡಿಗೇರ, ಆನಂದ ಕಂಬಾರ, ಸಂಜಯ ತೇಜುಮಾಳಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು. ಫೋಟೋ ಶಿರ್ಷಿಕೆ: 14 ಕಾಗವಾಡ 01- ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ಶಿವಾನಂದ ಬಡಿಗೇರ ಎಂಬಿಬಿಎಸ್ ಪದವಿಗೆ ಆಯ್ಕೆಗೊಂಡ ಪ್ರಯುಕ್ತ ಸಮಾಜದ ವತಿಯಿಂದ ಸನ್ಮಾನಿಸುತ್ತಿರುವ ಚಿತ್ರ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 