ರಾಜ್ಯಮಟ್ಟದ ಮಾಧ್ಯಮ ರತ್ನ ಸಿರಿ ಪ್ರಶಸ್ತಿಗೆ ಶಂಕರ ಹೆಬ್ಬಾಳ ಆಯ್ಕೆ

ರಾಜ್ಯಮಟ್ಟದ ಮಾಧ್ಯಮ ರತ್ನ ಸಿರಿ ಪ್ರಶಸ್ತಿಗೆ ಶಂಕರ ಹೆಬ್ಬಾಳ ಆಯ್ಕೆ Shankar Hebbal selected for state-level Madhyamika Ratna Siri Award

ಮುದ್ದೇಬಿಹಾಳ 05 :  ತಾಳಿಕೋಟಿಯ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ 7ನೇಯ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡುವ ರಾಜ್ಯ ಮಟ್ಟದ ಮಾಧ್ಯಮ ರತ್ನ ಸಿರಿ ಪ್ರಶಸ್ತಿಗೆ ಪತ್ರಕರ್ತ ಶಂಕರ ಹೆಬ್ಬಾಳ ಆಯ್ಕೆಯಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದ ನಿವಾಸಿಯಾದ ಪತ್ರಕರ್ತ ಶಂಕರ ಹೆಬ್ಬಾಳ ಪ್ರಜಾವಾಣಿ, ವಿಜಯವಾಣಿ ಸೇರಿದಂತೆ ಪ್ರಸ್ತುತ ಸುದ್ದಿಮೂಲ ದಿಪತ್ರಿಕೆಯಲ್ಲಿ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.ಪ್ರಶಸ್ತಿ ಪ್ರಧಾನ ಸಮಾರಂಭ ರವಿವಾರ ಜೂನ್ 7 ರಂದು ಬೆಳಿಗ್ಗೆ 9 ಗಂಟೆಗೆ ಖಾಸ್ಗತೇಶ್ವರ ಸಭಾಂಗಣ ತಾಳಿಕೋಟಿ ಯಲ್ಲಿ ನಡೆಯಲಿದೆ.