ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
Seed distribution program launched
ತಾಳಿಕೋಟಿ 03: ರೈತ ಸಂಪರ್ಕ ಕೇಂದ್ರದಲ್ಲಿ ಸನ್ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಸ್ಥಳದಲ್ಲಿ ತೊಗರಿ ಬೀಜಗಳಿಗೆ ಬೀಜೋಪಚಾರದ ಪ್ರಾತ್ಯಕ್ಷಿತೆಯನ್ನು ಕೈಗೊಂಡು ರೈತರಿಗೆ ಅದರಿಂದಾಗುವ ಅನುಕೂಲಗಳ ಬಗ್ಗೆ ಮಾಹಿತಿ ಒದಗಿಸಲಾಯಿತು. ರೈತರು ತೊಗರಿ ಬೆಳೆಯಲ್ಲಿ ಅಗಲ ಸಾಲು ಬಿತ್ತನೆ, ಅಂತರ ಬೇಸಾಯ ಪದ್ಧತಿ, 45 ದಿನಗಳ ನಂತರ ಕುಡಿ ಚಿವುಟುವದು ಮತ್ತು ಪಲ್ಸ್ ಮ್ಯಾಜಿಕ್ ಪಲ್ಸ್ ಬುಸ್ಟರ್ ಉಪಯೋಗದಿಂದಾಗಿ ತೊಗರಿ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಬಹುದೆಂದು ತಿಳಿಸಲಾಯಿತು.
ಸದ್ಯ ಕೇಂದ್ರದಲ್ಲಿ 114 ಕ್ವಿಂಟಲ ತೊಗರಿ, 60 ಕೆಜಿ ಹೆಸರು, 960 ಕೆಜಿ ಮೆಕ್ಕೆಜೋಳ, 150 ಕೆಜಿ ಸೂರ್ಯಕಾಂತಿ, 150 ಕೆಜಿ ಹೈಬ್ರಿಡ್ ಸಜ್ಜೆ ದಾಸ್ತಾನಿಕರಿಸಲಾಗಿದೆ. ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಡಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್,ರವಿ ಗೌಡ ಪಾಟೀಲ, ಹನುಮಂತರಾಯಗೌಡ ಗೂಗಲ್, ಕೃಷಿ ಅಧಿಕಾರಿಗಳಾದ ಮಹೇಶ ಜೋಶಿ ಸಿಬ್ಬಂದಿಗಳಾದ ಸಂಗಮೇಶ ಪಾಟೀಲ, ಕಿರಣ ಬೊಮ್ಮನಹಳ್ಳಿ, ಹನುಮಂತರಾಯ ಕುಂಟರೆಡ್ಡಿ, ವಿರುಪಾಕ್ಷಿ ನಂದಿಕೋಲ, ಬಸವರಾಜ ಜಾಲವಾದಿ, ಹಿರಗಪ್ಪ ಅರಳಿಕಟ್ಟಿ ಹೋಬಳಿ ವ್ಯಾಪ್ತಿಯ ರೈತರು ಮತ್ತು ಕೃಷಿ ಸಖಿಯರು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 