ಹೂವಿನ ಹಡಗಲಿ

ಶಾಲಾ ಕಾಲೇಜಿಗೊಂದು ಕನ್ನಡ ಕಾರ್ಯಕ್ರಮ ವಿಶಿಷ್ಟ ಪ್ರಯತ್ನ: ಹಳ್ಳಿಗುಡಿ

ಶಾಲಾ ಕಾಲೇಜಿಗೊಂದು ಕನ್ನಡ ಕಾರ್ಯಕ್ರಮ ವಿಶಿಷ್ಟ ಪ್ರಯತ್ನ: ಹಳ್ಳಿಗುಡಿ

ಲೋಕದರ್ಶನ ವರದಿ

ಹೂವಿನಹಡಗಲಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕವು ಶಾಲಾ ಕಾಲೇಜಿಗೊಂದು ಕನ್ನಡ ಕಾರ್ಯಕ್ರಮವನ್ನು ಸ್ವತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ವಿಶಿಷ್ಟ ರೀತಿಯಲ್ಲಿ ಸಂಯೋಜಿಸಿ ವಿವಿಧ 17 ಶೀರ್ಷಿಕೆಗಳಡಿ ಪ್ರತಿ ಶೀರ್ಷಿಕೆಗೆ ಸಂಬಂಧಿಸಿದ 10 ವಿಷಯಗಳನ್ನು ಜೋಡಿಸಿ ಒಟ್ಟು 173 ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿ ತಾಲೂಕಿನಾದ್ಯಾಂತ ಕನ್ನಡ ಪ್ರಜ್ಞೆ, ಸಾಹಿತ್ಯ ಪ್ರೀತಿಯನ್ನು ಜಾಗೃತ ಗೊಳಿಸುವ ಕಾರ್ಯ ನಿರ್ವಹಿಸಿರುವುದು ಅಭಿಮಾನದ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಹಳ್ಳಿಗುಡಿ ಅಭಿಪ್ರಾಯ ಪಟ್ಟರು. 

ಕನ್ನಡ ಸಾಹಿತ್ಯ ಪರಿಷತ್ತು ವರಕನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಕಾಲೇಜಿಗೊಂದು  ಕನ್ನಡ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

* ಸ್ವಾತಂತ್ರ್ಯ ಸಂಭ್ರಮ * ಏಕೀಕರಣ ಸಂಭ್ರಮ *ಕನ್ನಡ ಕಣ್ಮಣಿಗಳ ಸಂಭ್ರಮ * ಕೃಷಿ ಸಂಭ್ರಮ * ದಾರ್ಶನಿಕರ ಸಂಭ್ರಮ * ವಿಜ್ಞಾನ ಸಂಭ್ರಮ * ಶಿಕ್ಷಣ ಸಂಭ್ರಮ * ರಂಗ ಸಂಭ್ರಮ * ಸಾಹಿತ್ಯ ಸಂಭ್ರಮ * ಮಹಿಳಾ ಸಂಭ್ರಮ * ಕನ್ನಡ ರಾಜ ಮನೆತನಗಳ ಸಂಭ್ರಮ * ಪತ್ರಿಕಾ ಸಂಭ್ರಮ * ಲಲಿತಾ ಕಲಾ ಸಂಭ್ರಮ * ಬಂಡಾಯ ಸಾಹಿತ್ಯ ಸಂಭ್ರಮ * ಕನ್ನಡ ಅನುಷ್ಠಾನ ಸಂಭ್ರಮ * ಜಾನಪದ ಸಂಭ್ರಮ * ಭಾವೈಕ್ಯ ಸಂಭ್ರಮ 

ಈ ವಿಶೇಷ ಶೀರ್ಷಿಕೆಗಳಲ್ಲಿ ಪ್ರಸ್ತುತ ಸಮಾಜಕ್ಕೆ, ವಿದ್ಯಾಥರ್ಿಗಳಿಗೆ ಅವಶ್ಯವಿರುವ ವಿಷಯಗಳನ್ನು ಚರ್ಚಿ ಸಿರುವುದು ಉದಯೋನ್ಮುಖರಿಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯವೆಂದರು.  ಕನ್ನಡ,ಕನ್ನಡಿಗ,ಕನರ್ಾಟಕ ವಿಷಯ ಕುರಿತು ಡಾ. ಕೆ. ಸತೀಶ ಮಾತನಾಡಿ ಕನ್ನಡ ಭಾಷೆಯ ಉಗಮ ಶಾಸನಗಳಲ್ಲಿ ಕನ್ನಡತ್ವ ಕನ್ನಡ ಪ್ರದೇಶದ ಭೌಗೋಳಿಕ  ವಿಸ್ತಾರ ಕನ್ನಡರಿಗರ ಸಂಸ್ಕೃತಿ ಸಾಹಸ, ಸಾಹಿತ್ಯಗಳನ್ನು ಚರಿತ್ರೆಯ ಮೂಲಕ ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ವೀರೇಂದ್ರ ಪಾಟೀಲ್ ಮಾತನಾಡಿ ಬಹಳ ವರ್ಷಗಳ ನಂತರ ಪರಿಷತ್ತು ಈ ಕಾರ್ಯಕ್ರಮ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪನ್ಯಾಸಕರಿಗೂ, ಆಯೋಜಿಸಲು ಸಹಕರಿಸಿದ ಶಾಲಾ ಕಾಲೇಜಿನ ಮುಖ್ಯಸ್ಥರನ್ನು, ಇಲಾಖೆಯ ಅಧಿಕಾರಿಗಳನ್ನು  ಸ್ಮರಿಸಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಗುತ್ತಲ ಬಸವರಾಜ ವಹಿಸಿದ್ದರು. ಶಿಕ್ಷಕ ಸಮೂಹದಲ್ಲಿ ಸಾಹಿತ್ಯಾಭಿರುಚಿಯನ್ನು ಸಂಚಲನ ಗೊಳಿಸಿದ್ದಕ್ಕಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಜಗದೀಶ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ  ಎ.ಎಂ. ಚನ್ನವೀರಸ್ವಾಮಿ ಇಟ್ಟಗಿ ಘಟಕದ ನಿಂಗರಾಜ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಫೀಕ್ ಸ್ವಾಗತಿಸಿದರು. ಸಂಗೀತ ಶಿಕ್ಷಕ ಯುವರಾಜ ಗೌಡ  ವಚನಗಾಯನ ಮಾಡಿದರು. ಗಣಕ ಯಂತ್ರ ಶಿಕ್ಷಕ ವಿಜಯ್ ನಿರ್ವಹಿಸಿದರು.  ಬಸವರಾಜ ರೊಟ್ಟಿ ವಂದಿಸಿದರು. ನಂತರ ಮಕ್ಕಳಿಂದ ಕಿರು ನಾಟಕ  ಕೃಷ್ಣ-ಸುಧಾಮ ಪ್ರದರ್ಶನಗೊಂಡಿತು. 

ಸುದ್ದಿ ಓದಿ