ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮ  Sapling planting program organized as part of World Environment Day

ಲೋಕದರ್ಶನ ವರದಿ 

ಯರಗಟ್ಟಿ 05 : ‘ನಾವು ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ’ ಎಂದು ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಅಭಿಪ್ರಾಯಪಟ್ಟರು. ಸಮೀಪದ ಸತ್ತಿಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಸಾಮಾಜಿಕ ಅರಣ್ಯ ವಲಯ ಸವದತ್ತಿ, ತಾಲೂಕ ಪಂಚಾಯತ, ಯರಗಟ್ಟಿ-ಸವದತ್ತಿ, ತಾಲೂಕಾ ಆಡಳಿತ ಯರಗಟ್ಟಿ ಇವರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. 

‘ಭೂಮಿಯ ಮೇಲೆ ಜೀವವಿರುವ ಪ್ರತಿಯೊಂದು ಜೀವ ರಾಶಿಗೆ ಆಹಾರಕ್ಕಿಂತ ಮೊದಲು ಗಾಳಿ ಅತ್ಯಗತ್ಯವಾಗಿದೆ. ಇಂದಿನ ಸ್ಥಿತಿಗತಿಯನ್ನು ನೋಡುತ್ತಿದ್ದರೆ ಮಾನವನಿಗೆ ಗಿಡಗಳ ಮಹತ್ವದ ಅರಿವು ಉಂಟಾಗುತ್ತಿದೆ. ಮಾನವ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟುವುದು ಮತ್ತು ಭೂಮಿಯನ್ನು ರಕ್ಷಿಸುವುದು ಇದರ ಗುರಿಯಾಗಿದೆ’ ಎಂದರು. ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಬೇಕು.  

ಪರಿಸರದ ಮೇಲೆ ಮಾನವ ಚಟುವಟಿಕೆಗಳ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವುದು ಮತ್ತು ನಮ್ಮ ಪರಿಸರವನ್ನು ರಕ್ಷಿಸುವುದು ನಮ್ಮ ಕರ್ತವ್ಯ’ ಎಂದು ಅವರು ಹೇಳಿದರು. 

ಸವದತ್ತಿ ವಲಯ ಅರಣ್ಯ ಅಧಿಕಾರಿ ನೀಹಾ ತೋರಗಲ್ಲ ಮಾತನಾಡಿ ಗಿಡ ಮರಗಳ ನಾಶದಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಾ. ಪಂ. ಇಓ ಆನಂದ ಬಡಕುಂದ್ರಿ, ಸಿಡಿಪಿಓ ಅಮೃತ ಸಾನಿಕೊಪ್ಪ, ಬಿಇಓ ಎ. ಎ. ಖಾಜಿ, ಪಿಡಿಓ ಎ. ಬಿ. ಬಂಗಾರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕೆಎಂಎಫ್ ನಿದೇರ್ಶಕ ಶಂಕರ ಇಟ್ನಾಳ, ಪ. ಪಂ. ಸದಸ್ಯ ನಿಖಿಲ ಪಾಟೀಲ, ಎಸ್‌ಡಿಎಂಸಿ ಉಪಾಧ್ಯಕ್ಷ ಬಸಯ್ಯ ಸಾಲಿಮಠ, ಪ್ರಕಾಶ ವಾಲಿ, ಉಮೇಶ ಮಾಗುಂಡನ್ನವರ, ಈರಣ್ಣಾ ಹೊಸಮನಿ, ತಿಮ್ಮಣ್ಣಾ ಯಡಹಳ್ಳಿ, ಮುದಕಪ್ಪ ದಳವಾಯಿ, ವಿಠ್ಠಲ ಭಾಂಗಿ, ಪ್ರಾಂಶುಪಾಲ ನಾಗರಾಜು ಕೆ. ಉಪ ಪ್ರಾಂಶುಪಾಲ ಮಂಜುಳಾ ಲೋಕನ್ನವರ,

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಎಸ್‌. ಬಿ. ತೋರಗಲ್ಲ, ಸಿಆರ್‌ಪಿ ಬಾಳಪ್ಪ ಸಿದ್ದಬಸನ್ನವರ, ಮಹಾಂತೇಶ ಪಟ್ಟಣಶೆಟ್ಟಿ, ಕುಬ್ರಾ ದಂತಾಳಿ, ಉಪ ವಲಯ ಅರಣ್ಯ ಅಧಿಕಾರಿ ಎಸ್‌. ವಾಯ್ .ಸಿದ್ದರಡ್ಡಿ, ಬಿ. ಎಸ್‌. ಉಪ್ಪಾರ, ಗಸ್ತು ಅರಣ್ಯ ಪಾಲಕ ವಿ. ಯು. ಇಟ್ನಾಳ, ಅರಣ್ಯ ವಿಕ್ಷಕ ಶ್ರೀಶೈಲ ಯರಗಣವಿ ಸೇರಿದಂತೆ ಶಿಕ್ಷಕ-ಶಿಕ್ಷಕಿಯರ ಮತ್ತು ವಿದ್ಯಾರ್ಥಿಗಳು ಇತರರಿದ್ದರು. 

ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ತಹಶೀಲದ್ದಾರ ಎಂ. ವ್ಹಿ. ಗುಂಡಪ್ಪಗೋಳ, ಬಿಇಓ ಎ. ಎ. ಖಾಜಿ, ಸಿಡಿಪಿಓ ಅಮೃತ ಸಾನಿಕೊಪ್ಪ, ವಲಯ ಅರಣ್ಯ ಅಧಿಕಾರಿ ನೀಹಾ ತೋರಗಲ್ಲ, ಪ್ರಕಾಶ ವಾಲಿ, ನೀಲಕಂಠ ಸಿದ್ದಬಸನ್ನವರ, ಶಂಕರ ಇಟ್ನಾಳ ಇದ್ದರು.