ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಮಹಾನ್ ನಾಯಕ ಸಂಗೊಳ್ಳಿ ರಾಯಣ್ಣ - ನಾರಯಣ ಕಾಳೆ
Sangolli Rayanna, a great leader who risked his life for freedom: Narayana Kale
ಹಾವೇರಿ: ದೇಶ ಕಂಡ ಅಪ್ರತಿಮ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕರ್ನಾಟಕದ ಸಂಗೊಳ್ಳಿ ರಾಯಣ್ಣ ಅತ್ಯಂತ ಪ್ರಮುಖರು. ನಾಡಿನ ಸ್ವಾತಂತ್ರ್ಯಕ್ಕಾಗಿ ಸಾಮ್ರಾಜ್ಯಶಾಹಿ ಆಂಗ್ಲರ ವಿರುದ್ಧ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡಿ ಪ್ರಾಣವನ್ನು ಅರ್ಪಿಸಿ ಹುತಾತ್ಮರಾದ ಮಹಾನ್ ನಾಯಕ ಸಂಗೊಳ್ಳಿ ರಾಯಣ್ಣ ಎಂದು ಡಿವೈಎಫ್‌ಐ ಸಂಚಾಲಕರು, ವಕೀಲರಾದ ನಾರಾಯಣ ಕಾಳೆ ಮಾತನಾಡಿದರು.
ಶಿವಾಜಿ ನಗರದ ಎಸ್.ಎಫ್.ಐ ಕಚೇರಿ ಎದುರು ಬಾಲಸಂಘಂ ಆಯೋಜಿಸಿದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಗೌರವ ಸಲ್ಲಿಸಿ ಮಾತನಾಡಿದರು.ಜಿಲ್ಲಾ ಪತ್ರಿಕಾ ವರದಿಗಾರರು, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಆರೇರ್ ಅವರು, ಸಂಗೊಳ್ಳಿ ರಾಯಣ್ಣ ಅವರ ಜನ್ಮ ದಿನದ ಪ್ರಯುಕ್ತ ಬಾಲಸಂಘಂ ವತಿಯಿಂದ ಚಿತ್ರಕಲೆ ಸ್ಪರ್ಧೆಯನ್ನು ಏರಿ್ಡಸಿದ್ದು ಸ್ಪರ್ಧೆದಾರರ ಪೈಕಿ ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪುಸ್ತಕ, ಪೆನ್ನು ಬಹುಮಾನಗಳನ್ನು ವಿತರಣೆ ಮಾಡಿ ದೇಶಪ್ರೇಮ ಬಿತ್ತುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ವಿದ್ಯಾರ್ಥಿ-ಯುವಜನರಿಗೆ ಹುರಿದುಂಬಿಸುವ ನಿಟ್ಟಿನಲ್ಲಿ ಮಾದರಿಯಾಗಲಿ. ರಾಯಣ್ಣ ಅವರು ಜೀವನ ಚರಿತ್ರೆಯನ್ನು ಅರಿತು ಅಧ್ಯಯನ ಶೀಲರಾಗಬೇಕು ಆಗ ಮಾತ್ರ ದೇಶಪ್ರೇಮಿಗಳು ಹುಟ್ಟಿಕೊಳ್ಳಲು ಸಾದ್ಯ. ಮಹಾನ್ ಕ್ರಾಂತಿಕಾರಿಗಳ ತ್ಯಾಗ ಬಲಿದಾನ ಸ್ಮರಣೀಯ ಎಂದರು.ಶ್ರೀಶಕ್ತಿ ತೆರೆದ ತಂಗದಾಣದ ಮುಖ್ಯಸ್ಥರಾದ ಪುಟ್ಟಪ್ಪ ಹರವಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಕುರಿತು ಚಿತ್ರಕಲೆ, ಪ್ರಬಂಧ, ಚರ್ಚೆ ಸ್ಪರ್ಧೆಗಳು ಓದುವ ಹವ್ಯಾಸ ಬೆಳೆಸಿಕೊಳಲು ಸಹಾಯಕವಾಗುತ್ತದೆ. ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶಗಳು ದೊರೆಯುತ್ತವೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬಿತ್ತುವ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಕೃಷ್ಣ ನಾಯ್ಕ್, ಮುಖಂಡರಾದ ಸುನಿಲ್ ಕುಮಾರ್ ಎಲ್, ಅರುಣಕುಮಾರ ನಗಾವತ್ ಬಾಲ ಸಂಘಂನ ಧನುಷ್ ದೊಡ್ಡಮನಿ, ಸಂಗೀತಾ, ಸಂದೀಪ , ಮಹಾಂತೇಶ್ ಗುಡ್ಡಪ್ಪ , ಮನೋಜ್ ಬಿ , ಸುದರ್ಶನ್ ಪಿ, ಆಕಾಶ್ ಡಿ , ವೈಭವ ಪಿ, ತೇಜು ದೊಡ್ಡಮನಿ ಸೇರಿದಂತೆ ಉಪಸ್ಥಿತರಿದ್ದರು. ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರಾ ಕೋರವರ ನಿರೂಪಿಸಿದರು.ವಂದನೆಗಳೊಂದಿಗೆ,ಕೃಷ್ಣ ನಾಯ್ಕ್ಜಿಲ್ಲಾ ಸಹ ಕಾರ್ಯದರ್ಶಿಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ)ಹಾವೇರಿ ಜಿಲ್ಲಾ ಸಮಿತಿ.9845787254
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 