ಧಾರವಾಡದಲ್ಲಿ ಎಸ್‌ಐಆರ್ 2026 ಜಾಗೃತಿ ಜಾಥಾ

ಧಾರವಾಡದಲ್ಲಿ ಎಸ್‌ಐಆರ್ 2026 ಜಾಗೃತಿ ಜಾಥಾ  SIR 2026 awareness rally in Dharwad

ಧಾರವಾಡ 29: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ವಿಶೇಷ ಸಮಗ್ರ ಪರೀಶೀಲನೆ (ಖಋ-2026) ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಜಾಥಾ ಆಯೋಜಿಸಲಾಯಿತು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು. ಮತದಾರರ ಪಟ್ಟಿ ಪರಿಶುದ್ಧಗೊಳಿಸುವುದು, ಅರ್ಹ ನಾಗರಿಕರನ್ನು ಸೇರೆ​‍್ಡಗೊಳಿಸುವುದು ಹಾಗೂ ಜನಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.