ಯಲಬುರ್ಗಾದಲ್ಲಿ ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ
Karahunnima celebrated with enthusiasm in Yelaburga
ಯಲಬುರ್ಗಾ 29: ಉತ್ತರ ಕರ್ನಾಟಕದ ರೈತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾರಹುಣ್ಣಿಮೆಯನ್ನು ಯಲಬುರ್ಗಾ ತಾಲ್ಲೂಕಿನಲ್ಲಿ ರೈತರು ಸಡಗರ-ಸಂಭ್ರಮದಿಂದ ಆಚರಿಸಿದರು. ಕಾರಹುಣ್ಣಿಮೆ ಅಂಗವಾಗಿ ರೈತರು ಎತ್ತು, ಹೋರಿಗಳನ್ನು ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣ ಬಳಿದು, ವಿವಿಧ ಅಲಂಕಾರಗಳೊಂದಿಗೆ ಸಿಂಗರಿಸಿ ಮೆರವಣಿಗೆ ನಡೆಸಿದರು. ಈ ದಿನ ಎತ್ತುಗಳಿಗೆ ಕೃಷಿ ಕೆಲಸದಿಂದ ವಿಶ್ರಾಂತಿ ನೀಡಿ, ಹೋಳಿಗೆ, ಕಡುಬು ಸೇರಿದಂತೆ ವಿಶೇಷ ತಿನಿಸುಗಳನ್ನು ಉಣಬಡಿಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದ ಕರಿ ಹರಿಯುವ ಕಾರ್ಯಕ್ರಮದಲ್ಲಿ ಬಿಳಿ ಹಾಗೂ ಕೆಂದು ಬಣ್ಣದ ಎತ್ತುಗಳನ್ನು ಮಾತ್ರ ಓಟಕ್ಕೆ ಬಿಡಲಾಯಿತು. ಈ ಬಾರಿ ಬಿಳಿ ಎತ್ತು ಮೊದಲು ಕರಿ ಹರಿದ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳದ ಫಸಲು ಸಮೃದ್ಧವಾಗಿ ಬೆಳೆಯಲಿದೆ ಎಂಬ ನಂಬಿಕೆಯನ್ನು ರೈತರು ವ್ಯಕ್ತಪಡಿಸಿದರು. ಕೆಂದು ಬಣ್ಣದ ಎತ್ತು ಮೊದಲು ಕರಿ ಹರಿದರೆ ಮುಂಗಾರು ಬೆಳೆ ಉತ್ತಮವಾಗುತ್ತದೆ ಎಂಬುದು ರೈತರ ನಂಬಿಕೆಯಾಗಿದೆ.
ಕರಿ ಹರಿದ ಎತ್ತಿಗೆ ಗ್ರಾಮಸ್ಥರು ಮೆರವಣಿಗೆ ನಡೆಸಿ ಗೌರವ ಸಲ್ಲಿಸಿದರು. ಬಳಿಕ ಗುಂಡು ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾಕೂಟಗಳು ನಡೆದವು. ನಂತರ ರೈತರು ಶಕ್ತಿ ದೇವತೆಗಳ ದೇವಾಲಯಗಳಿಗೆ ತೆರಳಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆನಂದ ಉಳ್ಳಾಗಡ್ಡಿ, ಶಿವಪ್ಪ ಭೂತೆ, ಬಸವಲಿಂಗಪ್ಪ ಕೊತ್ತಲ್, ಮಲ್ಲೇಶಗೌಡ ಮಾಲಿಪಾಟೀಲ್, ಮಲ್ಲಣ್ಣ ತೆಂಗಿನಕಾಯಿ, ಮಂಜುನಾಥ ಅಧಿಕಾರಿ, ವಿರೂಪಾಕ್ಷಯ್ಯ ಗಂಧದ, ಹೇಮಣ್ಣ ಖಾನಾವಳಿ, ದೊಡ್ಡಪ್ಪ ಉಳ್ಳಾಗಡ್ಡಿ, ಕಳಕಪ್ಪ ಗದ್ದಿ, ಕಳಕಪ್ಪ ಗುಳಗುಳ್ಳಿ, ಬಸವರಾಜ ಕೋಣದ, ಮಲ್ಲಪ್ಪ ಸ್ಟಾಂಪಿನ ಸೇರಿದಂತೆ ರೈತರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 