ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಬಿಳ್ಕೊಡುಗೆ.
ರಾಣೆಬೆನ್ನೂರು 29: ಇಲ್ಲಿನ ಶ್ರೀ ಆದಿಶಕ್ತಿ ದೇವಸ್ಥಾನ ಸಮುದಾಯ ಭವನದಲ್ಲಿ ವಾಗೀಶ ನಗರದ ಶ್ರೀ ಕನಕದಾಸ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಚಾಮರಾಜ ಎಸ್. ಕನಗನಹಳ್ಳಿ ನಿವೃತ್ತರ ಅಭಿನಂದನಾ ಬೀಳ್ಕೊಡುಗೆ ಸಮಾರಂಭವು, ಅದ್ದೂರಿಯಾಗಿ ನಡೆಯಿತು. ತಮ್ಮ ಅಚ್ಚುಮೆಚ್ಚಿನ ಗುರುಗಳ ಬೀಳ್ಕೊಡುಗೆಯಲ್ಲಿ ಪಾಲ್ಗೊಂಡ ಶಿಷ್ಯ ಬೆಳಗವು, ಅವರನ್ನು ಸನ್ಮಾನಿಸಿ, ಅಭಿನಂದಿಸಿ ಗೌರವಿಸಿದರು.
ನಂದಿ ಗುಡಿ ವೃಷಭಫುರಿ ಮಹಾ ಸಂಸ್ಥಾನ ಬ್ರಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ, ಗಣ್ಯರಾದ, ಜಿ.ಕೆ. ಬೀರಣ್ಣನವರ, ಲಕ್ಷ್ಮಿಕಾಂತ್ ಹಲಗೂರ,ಸಿ. ವಿ. ಅಡಿವೇರ, ಜಿ. ಜಿ ಹೊಟ್ಟಿಗೌಡರ, ಎಸ್. ಹೆಚ್. ಪಾಟೀಲ್, ಸರೋಜಮ್ಮ ಬಾಣದ, ಪಾರ್ವತಮ್ಮ ಕನಕನಹಳ್ಳಿ, ಪ್ರಭಾವತಿ ತಿಳುವಳ್ಳಿ, ಆರ್. ಜೆ. ಪಾಟೀಲ್, ಸಿ.ಎನ್. ಗ್ಯಾನಗೌಡ್ರ ಜಿ.ಎಂ. ಹನಗುಂದ, ಬಸವರಾಜ ನಾಯಕ ಜಿ. ಕೆ.ಬಾತಿ, ಮಹೇಶಬಾಬು ಶೇಪುರ ಬಸವರಾಜ ಶಾಮನೂರ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು.