ಎಪಿಎಂಸಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ
ಹೂವಿನಹಡಗಲಿ 09: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಸ್ಥಾನಕ್ಕೆ ಸೋಗಿಯ ಗಡ್ಡಿ ಬಸವರಾಜ ರಾಜೀನಾಮೆ ಸಲ್ಲಿಸಿದ್ದಾರೆ. 2017ರಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಸೋಗಿ ಗಡ್ಡಿಬಸವರಾಜ ಅವರ ಅವಧಿ ಇನ್ನೂ ಆರು ತಿಂಗಳ ಬಾಕಿ ಇದೆ. ಅಧ್ಯಕ್ಷ ಸ್ಥಾನದ ಪ್ರಬಲ ಆಖಾಂಕ್ಷಿಯಾಗಿದ್ದ ಅವರಿಗೆ ಅಧ್ಯಕ್ಷ ಸ್ಥಾನ ಮೂರು ಬಾರಿ ಅವಕಾಶ ಸಿಗದ ಕಾರಣ ಬೇಸರಗೊಂಡು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೃಷಿ ಮಾರಾಟ ಇಲಾಖೆಯ ನಿರ್ದೇಶಕಿಗೆ ರಾಜೀನಾಮೆ ಪತ್ರ ನೀಡಿ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.